×
Ad

ಪೊಳಲಿ: ಧಾರ್ಮಿಕ ಸಭೆ-ಸನ್ಮಾನ ಕಾರ್ಯಕ್ರಮ

Update: 2019-03-13 17:57 IST

ಬಂಟ್ವಾಳ, ಮಾ. 13: ಭಗವಂತ ಯಾವುದನ್ನು ತನ್ನ ಭಕ್ತರಿಗೆ ಪ್ರಸನ್ನವಾಗಿ ಕೊಡುವ ಪ್ರಸಾದವನ್ನು ಸ್ವೀಕರಿಸಿದ ಭಕ್ತನಿಗೆ ಧೈರ್ಯ, ಆತ್ಮವಿಶ್ವಾಸ, ಇಚ್ಛಾಶಕ್ತಿ ಹೊಂದಿ ಕೆಲಸದಲ್ಲಿ ವಿಜಯ ಸಾಧಿಸಲು ಸಾಧ್ಯವಾಗುತ್ತದೆ ಎಂದು ವಿದ್ವಾಂಸ ಶಿಕಾರಿಪುರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಅವರು ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಉತ್ತರ ಪ್ರದೇಶದಲ್ಲಿ ಕುಂಭಮೇಳ ಎಷ್ಟು ವಿಜ್ರಂಬಣೆಯಿಂದ ನಡೆಯಿತೋ, ದಕ್ಷಿಣದಲ್ಲಿ ಪೊಳಲಿ ರಾಜರಾಜೇಶ್ವರಿ ಪರಿವಾರ ದೇವರುಗಳ ಬ್ರಹ್ಮಕಲಶೋತ್ಸವವು ಅಷ್ಟೇ ವಿಜ್ರಂಬಣೆಯಿಂದ ನಡೆಯುತ್ತಿದೆ. ಇಲ್ಲಿನ ಅಚ್ಚುಕಟ್ಟಾದ ವ್ಯವಸ್ಥೆಯಿಂದ ಎಲ್ಲರಿಗೂ ದೇವರ ದರ್ಶನ ಭಾಗ್ಯ ಸಿಗುತ್ತಿದೆ ಎಂದು ನುಡಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಏರ್ಯ ಲಕ್ಷ್ಮಿ ನಾರಾಯಣ ಆಳ್ವ ಮಾತನಾಡಿದರು. ಈ ವೇಳೆ ಹೊರರಾಜ್ಯಗಳಲ್ಲಿ ದೇಣಿಗೆ ಸಂಗ್ರಹಿಸಿದ ಭಕ್ತರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರವೀಂದ್ರನಾಥ ಆಳ್ವ, ಪದ್ಮನಾಭ ಪಯ್ಯಡೆ ಕೂರಿಯಾಳ ಗುತ್ತು, ಆನಂದ್ ಶೆಟ್ಟಿ ಮುಂಬೈ, ದಿವಾಕರ ಶೆಟ್ಟಿ, ಹರೀಶ್ ಶೆಟ್ಟಿ ಐಕಳ, ಸುದೀರ್ ಶೆಟ್ಟಿ, ಅನ್ನಿ ಸಿ. ಶೆಟ್ಟಿ, ಕುಸುಮಾರ್ ಡಿ. ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಚೇರ ಸೂರ್ಯನಾರಾಯಣ ರಾವ್, ಡಾ. ಮಂಜಯ್ಯ ಶೆಟ್ಟಿ, ಯು.ಟಿ. ಆಳ್ವ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಾಸ್ತುಶಿಲ್ಪಿಗಳಾದ ಮಹೇಶ್ ಮುನಿಯಂಗಳ, ಸಾಗರ ರಿಯಾಲ್ಟಿ ಪ್ರಮೋಶನ್‍ನ ಗಿರಿಧರ ಶೆಟ್ಟಿ, ಸಿವಿಲ್ ಇಂಜಿನಿಯರ್ ರಿತೇಶ ದಾಸ್ ಅವರನ್ನು ಸಮ್ಮಾನಿಸಲಾಯಿತು.

ದೇವಳಕ್ಕೆ ಮಾಳವಿಕಾ ಭೇಟಿ

ಚಿತ್ರನಟಿ, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಪೊಳಲಿ ಶ್ರೀರಾಜರಾಜೇಶ್ವರಿ ದೇವಳಕ್ಕೆ ಭೇಟಿ ನೀಡಿದರು. ಬ್ರಹ್ಮಕಲಶ ಸಮಿತಿ ಅಧ್ಯಕ್ಷ, ಶಾಸಕ ಯು.ರಾಜೇಶ್ ನಾಯ್ಕ್ ಮತ್ತಿತರರು ಮಾಳಾವಿಕ ರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸುಲೋಚನಾ ಜಿ.ಕೆ.ಭಟ್, ದೇವದಾಸ ಶೆಟ್ಟಿ, ಉದಯಕುಮಾರ್ ರಾವ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News