×
Ad

ತೌಹೀದ್ ಆಂಗ್ಲ ಮಾಧ್ಯಮ ಶಾಲೆ: ಶಿಕ್ಷಕ- ರಕ್ಷಕರ ಸಭೆ

Update: 2019-03-13 18:30 IST

ಬಂಟ್ವಾಳ, ಮಾ. 13: ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕರ ಸಭೆಯು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎ ಸುಲೈಮಾನ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

2019-20ನೆ ಶ್ಯೆಕ್ಷಣಿಕ ಸಾಲಿಗೆ ಶಾಲಾ ಶುಲ್ಕ, ದಾಖಲಾತಿ ಪ್ರಕ್ರಿಯೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಶಾಲಾ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಅವರು ಮಾಹಿತಿ ನೀಡಿದರು.

ಪ್ರೌಢ-ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಮೆಟಿಲ್ಡಾ ಡಿಕೋಸ್ತಾರವರು ಶಾಲೆಯ 21 ಅಂಶಗಳ ನಿಯಮ ನಿಬಂಧನೆಗಳ ಬಗ್ಗೆ ಪೋಷಕರಿಗೆ ತಿಳಿಸಿದರು.

ಕೆ.ಜಿ ಮುಖ್ಯಸ್ಥೆ ಮಮತಾ ಸುವರ್ಣ, ಶಾಲಾ ಆಡಳಿತ ಮಂಡಳಿ ಸಂಚಾಲಕ ಮುಹಮ್ಮದ್ ಸಗೀರ್, ಸದಸ್ಯರಾದ ರಿಯಾಝ್ ಹುಸೈನ್, ಇಸ್ಮಾಯಿಲ್, ಶಬೀರ್ ಅಹ್ಮದ್, ಪಿಟಿಎ ಅಧ್ಯಕ್ಷ ಹನೀಫ್ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಮೆಟಿಲ್ಡಾ ಡಿಕೋಸ್ತಾ ಸ್ವಾಗತಿಸಿ, ಕೆ.ಜಿ ಮುಖ್ಯಸ್ಥೆ ಮಮತ ಸುವರ್ಣ ವಂದಿಸಿ, ಶಿಕ್ಷಕಿಯರಾದ ನಿಶ್ಮಿತಾ ಹಾಗೂ ಪೃಥ್ವಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News