​ ಚುನಾವಣಾ ಸುದ್ದಿಗಳ ಮೇಲೆ ನಿಗಾ: 24X7 ಪರಿಶೀಲನೆ ಕೇಂದ್ರ ಸ್ಥಾಪನೆ

Update: 2019-03-13 16:18 GMT

ಉಡುಪಿ, ಮಾ.13: ಲೋಕಸಭಾ ಚುನಾವಣೆಯ ಪ್ರಯುಕ್ತ ಚುನಾವಣಾ ಆಯೋಗದ ನಿರ್ದೇಶನದಂತೆ, ಜಿಲ್ಲೆಯ ಎಲ್ಲಾ ಮುದ್ರಣ, ಟಿವಿ, ರೇಡಿಯೋ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರ, ಪ್ರಚಾರಗೊಳ್ಳುವ ರಾಜಕೀಯ ಪಕ್ಷಗಳ ಜಾಹಿರಾತು, ಪ್ರಚಾರ ಕಾರ್ಯಕ್ರಮ, ಸುದ್ದಿಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ‘ಮೀಡಿಯಾ ಮಾನಿಟರಿಂಗ್ ಎಂಡ್ ಮೀಡಿಯಾ ಸರ್ಟಿಫಿಕೇಷನ್’ (ಎಂಸಿ ಎಂಸಿ) ಕೇಂದ್ರವನ್ನು ತೆರೆಯಲಾಗಿದ್ದು, ಇಲ್ಲಿ ಎಲ್ಲಾ ಚುನಾವಣಾ ಸುದ್ದಿಗಳ ಮೇಲೆ ಹದ್ದಿನಕಣ್ಣು ಇಡಲಾಗುತ್ತದೆ.

ಎಲ್ಲಾ ಮುದ್ರಣ ಮಾಧ್ಯಮ ಮತ್ತು ಸ್ಥಳೀಯ ಚಾನೆಲ್‌ಗಳಲ್ಲಿ ಪ್ರಸಾರ ವಾಗುವ ಕಾರ್ಯಕ್ರಮಗಳನ್ನು ವೀಕ್ಷಿಸುವ ಜೊತೆಗೆ ಸ್ಥಳೀಯ ಕೇಬಲ್ ಟಿವಿ ಕಾರ್ಯಕ್ರಮಗಳನ್ನು ಕೇಂದ್ರದಲ್ಲಿ ಸಂಪೂರ್ಣ ರೆಕಾರ್ಡ್ ಮಾಡಲಾಗುತ್ತದೆ.

ಸ್ಥಳೀಯ ಕೇಬಲ್ ಚಾನೆಲ್‌ಗಳಲ್ಲಿ ಜಾಹಿರಾತು ನೀಡಲು ಪೂರ್ವಾನುಮತಿ ಅಗತ್ಯವಿದೆ. ಈ ಕೇಂದ್ರದ ಪರಿಶೀಲನೆ ಸಮಯದಲ್ಲಿ ಕಂಡುಬರುವ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ಪ್ರಕರಣಗಳ ಕುರಿತು, ಸಂಬಂಧ ಪಟ್ಟ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಕ್ಷೇತ್ರ ಚುನಾವಣಾಧಿಕಾರಿ (ಆರ್‌ಒ) ಅವರು ಸಂಬಂಧಪಟ್ಟ ಅ್ಯರ್ಥಿಗಳಿಗೆ ಕಾರಣ ಕೇಳಿ ನೋಟೀಸು ನೀಡುವರು.

ಜಿಲ್ಲೆಯ ವಿವಿಧ ಇಲಾಖೆಗಳ ಸಿಬ್ಬಂದಿಗಳನ್ನು 3 ಪಾಳಿಯಲ್ಲಿ ವೀಡಿಯೋ ವೀಕ್ಷಣಾ ತಂಡಕ್ಕೆ ನೇಮಿಸಲಾಗಿದ್ದು, 8 ಚಾನೆಲ್‌ಗಳನ್ನು ವೀಕ್ಷಿಸಲು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಟಿವಿಯಲ್ಲಿ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮ ಗಳನ್ನು ಡಿವಿಆರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರವಾಗುವ ರಾಜಕೀಯ ಸುದ್ದಿಗಳನ್ನು ವೀಕ್ಷಣೆ ಾಡಲು ಸಹ ಸಿಬ್ಬಂದಿ ನೇಮಿಸಲಾಗಿದೆ.

ದಿನಪತ್ರಿಕೆಗಳಲ್ಲಿ ಪ್ರಸಾರವಾಗುವ ಜಾಹಿರಾತು, ಕಾಸಿಗಾಗಿ ಸುದ್ದಿ ಪ್ರಕರಣ ಗಳ ಪತ್ತೆ ಮಾಡಲು ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿದ್ದು, ಪ್ರತಿದಿನದ ಪತ್ರಿಕಾ ವರದಿ ವೀಕ್ಷಿಸಿ ಸಂಶಯ ಬಂದ ಕಾಸಿಗಾಗಿ ಸುದ್ದಿ ಪ್ರಟಣೆಯನ್ನು, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನುರಿತ ತಜ್ಞರನ್ನು ಒಳಗೊಂಡ ಸಮಿತಿಯ ವಿಚಾರಣೆಗೆ ನೀಡಿ, ಸುದ್ದಿ ನಿಜವಾಗಿದ್ದರೆ ಸಂಬಂದಪಟ್ಟವರ ವಿರುದ್ದ ಸೂಕ್ತಕ್ರಮ ಕೈಗೊಳ್ಳಲಾಗುವುದು ಹಾಗೂ ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹಿರಾತುಗಳನ್ನು ಸಂಗ್ರಹಿಸಿ, ಅದರ ವೆಚ್ಚದ ವಿವರಣೆಯನ್ನು ಚುನಾವಣಾ ಲೆಕ್ಕಪತ್ರ ತಂಡಕ್ಕೆ ನೀಡಲಾಗುವುದು.

ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲ ಪಾಟಿ ಅಧ್ಯಕ್ಷತೆಯ ಎಂಸಿಎಂಸಿ ಸಮಿತಿಯಲ್ಲಿ, ತಂಡದ ನೊಡೆಲ್ ಅಧಿಕಾರಿ ಯಾಗಿ ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಸದಸ್ಯರಾಗಿ ಹಿರಿಯ ಪತ್ರಕರ್ತ ವರದೇಶ್ ಹಿರೇಗಂಗೆ ಮತ್ತಿತರರು ಇದ್ದಾರೆ.

ಯಾವುದೇ ಹಂತದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಯಲು ಈ ತಂಡ ಕಾರ್ಯ ನಿರ್ವಹಿಸುತ್ತಿದೆ. ಅ್ಯರ್ಥಿಗಳ ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಚುನಾವಣಾ ವೆಚ್ಚ ತಂಡಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News