ಮೈಟ್ ಸಂಸ್ಥೆಗೆ ವಿಟಿಯು ಬಿ.ಇ ವಿಭಾಗದಲ್ಲಿ 4 ರ್ಯಾಂಕ್‌

Update: 2019-03-13 17:10 GMT

ಮಂಗಳೂರು, ಮಾ.13: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯದ ವತಿಯಿಂದ 2018ರ ಸಾಲಿನ ಬಿ.ಇ ಪರೀಕ್ಷೆಯಲ್ಲಿ ಮೂಡುಬಿದಿರೆಯ ಮಂಗಳೂರು ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್ (ಮೈಟ್) ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಅಗ್ರ ಕ್ರಮಾಂಕದ ರ್ಯಾಂಕ್ ಗಳಿಸಿದ್ದಾರೆ.

ಬಿ.ಇ.ಮೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಭಾಗದಲ್ಲಿ ಅನ್ನಾ ರೋಸ್ ಜೋನಿ ಎರಡನೆ ರ್ಯಾಂಕ್, ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರೀಯಾಂಕ ಎರಡನೆ ರ್ಯಾಂಕ್, ಮೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಾರ್ಥಕ್ ವಸಂತ್ 8ನೆ ರ್ಯಾಂಕ್ ಹಾಗೂ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ದಿನಕರ್ 10ನೆ ರ್ಯಾಂಕ್‌ಗಳಿಸಿದ್ದಾರೆ.

ರಾಜಲಕ್ಷ್ಮೀ ಎಜುಕೇಶನ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ 2017ರಲ್ಲಿ ಆರಂಭಗೊಂಡ ಮೈಟ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ ಆ್ಯಂಡ್ ಕಮ್ಯೂನಿಕೇಶನ್, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಮೆಕಾನಿಕಲ್, ಎರೋನಾಟಿಕಲ್, ಸಿವಿಲ್‌ ಮತ್ತು ಮೆಕ್ಟ್ರಾನಿಕ್ ಇಂಜಿನಿಯರ್ ವಿಭಾಗಗಳ ಪದವಿ ತರಗತಿಗಳು ನಡೆಯುತ್ತಿವೆ.

ವಿದ್ಯಾರ್ಥಿಗಳ ಸಾಧನೆಗೆ ಮೈಟ್ ಸಂಸ್ಥೆಯ ಅಧ್ಯಕ್ಷ ರಾಜೇಶ್ ಚೌಟ ಹರ್ಷ ವ್ಯಕ್ತಪಡಿಸಿ,ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News