ಬೀಡಿನಗುಡ್ಡೆ ಕಾರ್ಮಿಕನ ಕೊಲೆ ಪ್ರಕರಣ: ಓರ್ವನ ಬಂಧನ

Update: 2019-03-13 17:25 GMT

ಉಡುಪಿ, ಮಾ.13: ಉಡುಪಿ ನಗರಸಭೆಯ ಕಸವಿಲೇವಾರಿ ಕಾರ್ಮಿಕ ಸಂತೋಷ(32) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಉಡುಪಿ ಪೊಲೀಸರು ಮಾ.12ರಂದು ಉಡುಪಿಯಲ್ಲಿ ಬಂಧಿಸಿದ್ದಾರೆ.

ಬಂಧಿತನನ್ನು ಧಾರವಾಡ ಜಿಲ್ಲೆ ಕುಮಾರ್ ಸಂಗಪ್ಪ(42) ಎಂದು ಗುರುತಿಸ ಲಾಗಿದೆ. ಈತನ್ನು ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳಾದ ಹರೀಶ ಮತ್ತು ರಮೇಶ ಎಂಬವರು ತಲೆಮರೆಸಿಕೊಂಡಿದ್ದು, ಅವರ ಶೋಧ ಕಾರ್ಯ ವನ್ನು ಪೊಲೀಸರು ಮುಂದುವರೆಸಿದ್ದಾರೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಮೂವರು ಆರೋಪಿಗಳು ಮಾ.9ರಂದು ಮಧ್ಯರಾತ್ರಿ ಬಳಿಕ ಬೀಡಿನಗುಡ್ಡೆಯ ಉಡುಪಿ ನಗರಸಭೆಯ ನಿರಾಶ್ರಿತರ ವಸತಿ ಕಟ್ಟಡದಲ್ಲಿ ಸಂತೋಷ ಎಂಬವರನ್ನು ಅಲ್ಯೂಮಿನಿಯಂ ಪೈಪ್, ಬೆಲ್ಟ್‌ನಿಂದ ಹೊಡೆದು, ತಲೆಯನ್ನು ಗೋಡೆಗೆ ಜಜ್ಜಿ ತೀವ್ರ ಗಾಯಗೊಳಿಸಿ ಕೊಲೆ ಮಾಡಿದ್ದರು.

ಈ ಬಗ್ಗೆ ಉಡುಪಿ ನಗರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News