ಎಸ್.ಡಿ.ಎ.ಸಿ.ಯು ಆಟೋ ಯೂನಿಯನ್: ದ.ಕ. ಜಿಲ್ಲಾ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ, ಮಾ.13: ಸೋಶಿಯಲ್ ಡೆಮೊಕ್ರಿಟಿಕ್ ಆಟೋ ಚಾಲಕರ ಯೂನಿಯನ್ ದ.ಕ. ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಬಂಟ್ವಾಳದ ಪಾಣೆಮಂಗಳೂರಿನ ಅಕ್ಕರಂಗಡಿ ಕಚೇರಿಯಲ್ಲಿ ನಡೆಯಿತು.
ಜಿಲ್ಲಾಧ್ಯಕ್ಷರಾಗಿ ಅಬ್ದುಲ್ ಖಾದರ್ ಫರಂಗಿಪೇಟೆ, ಉಪಾಧ್ಯಕ್ಷ ಹಕೀಮ್ ಕಾನ, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫ ಪರ್ಲಿಯಾ, ಜೊತೆ ಕಾರ್ಯದರ್ಶಿಯಾಗಿ ಶಮೀರ್ ನಾಜೂಕು ಕೂರ್ನಡ್ಕ, ಕೋಶಾಧಿಕಾರಿಯಾಗಿ ಖಲೀಲ್ ಉಳ್ಳಾಲ, ಸದಸ್ಯರಾಗಿ ನೌಫಲ್ ಕುದ್ರೋಳಿ ಮಂಗಳೂರು ದಕ್ಷಿಣ, ಅಬ್ದುಲ್ ರಹಿಮಾನ್ ಸುಳ್ಯ, ಸಾಜುದ್ದೀನ್ ವಾಮಂಜೂರು ಮಂಗಳೂರು ಉತ್ತರ, ಇಸಾಕ್ ಪಿ.ಎಸ್.ಕೆ. ಸುನ್ನತ್ ಕೆರೆ ಆಯ್ಕೆ ಮಾಡಲಾಯಿತು.
ಚುನಾವಣಾ ವೀಕ್ಷಕರಾಗಿ ಎಸ್.ಡಿ.ಎ.ಸಿ.ಯು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಲೀಲ್ ಕೃಷ್ಣಾಪುರ, ಜಿಲ್ಲಾ ಸಂಚಾಲಕ ಜಾಬಿರ್ ಅರಿಯಡ್ಕ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅತಾವುಲ್ಲ ಜೋಕಟ್ಟೆ, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ ಉಪಸ್ಥಿತರಿದ್ದರು. ಮಂಗಳೂರು ಕ್ಷೇತ್ರ ಸಂಚಾಲಕ ಸುಲೈಮಾನ್ ಉಸ್ತಾದ್, ಪುತ್ತೂರು ತಾಲೂಕು ಸಂಚಾಲಕ ಆಸಿಫ್ ಬಡಕೋಡಿ ಹಾಗೂ ಜಿಲ್ಲೆಯ ಎಲ್ಲಾ ಕ್ಷೇತ್ರದ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕು ಸಂಚಾಲಕ ಮಾಲಿಕ್ ಕೊಳಕೆ ಕಾರ್ಯಕ್ರಮ ನಿರೂಪಿಸಿದರು.