ಡೈಮಂಡ್ ಸ್ಪೋರ್ಟ್ಸ್-ಕಲ್ಚರಲ್ ಅಸೋಸಿಯೇಶನ್ ಪದಾಧಿಕಾರಿಗಳ ಆಯ್ಕೆ
Update: 2019-03-20 18:31 IST
ಮಂಗಳೂರು, ಮಾ. 20: ಡೈಮಂಡ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಇದರ ವಾರ್ಷಿಕ ಮಹಾಸಭೆಯು ಉಳ್ಳಾಲದಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭ 2019-20ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಖಲೀಲ್ ಉಳ್ಳಾಲ, ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಸರ್ಮದ್, ಉಪಾಧ್ಯಕ್ಷರಾಗಿ ಖಾಲಿದ್ ಮತ್ತು ಕಾಸಿಂ, ಕಾರ್ಯದರ್ಶಿಯಾಗಿ ಹನೀಫ್ ಸಫನಗರ, ಜೊತೆ ಕಾರ್ಯದರ್ಶಿಯಾಗಿ ನಾಸಿರ್, ಕೋಶಾಧಿಕಾರಿಯಾಗಿ ಸಿರಾಜುದ್ದಿನ್ ಇಕ್ಬಾಲ್, ವ್ಯವಸ್ಥಾಪಕರಾಗಿ ಹನೀಫ್ ಗೋವಾ ಅವರನ್ನು ಆಯ್ಕೆ ಮಾಡಲಾಯಿತು.
ಸಲಹಾ ಸಮಿತಿ ಸದಸ್ಯರಾಗಿ ಖಲೀಲ್ ಜಮಾಲಿಯ, ಅಬ್ದುಲ್ ಸಲಾಂ, ತಾಹೀರ್ ಡೈಮಂಡ್ ಆಯ್ಕೆಯಾದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಅಬ್ದುಲ್ ರಝಾಕ್ ಸರ್ಮದ್ ಹಾಗೂ ನಿಕಟಪೂರ್ವ ಅಧ್ಯಕ್ಷ ಖಲೀಲ್ ಮಾತನಾಡಿದರು. ಕೋಶಾಧಿಕಾರಿ ಇಕ್ಬಾಲ್ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಲೆಕ್ಕಪತ್ರ ಮಂಡನೆಯನ್ನು ಅಂಗೀಕರಿಸಲಾಯಿತು.