ಬಿ.ಸಿ.ರೋಡ್‍ನಲ್ಲಿ ಪೊಲೀಸರಿಂದ ರೂಟ್ ಮಾರ್ಚ್

Update: 2019-03-20 13:03 GMT

ಬಂಟ್ವಾಳ, ಮಾ. 20: ಲೋಕಸಭಾ ಚುನಾವಣೆಯ ಮುಂಜಾಗ್ರತಾ ಕ್ರಮವಾಗಿ ಬಿ.ಸಿ. ರೋಡ್‍ನಲ್ಲಿ ಸುರಕ್ಷಾ ಸೀಮಾ ಬಲ್ ಪಡೆಯ ಯೋಧರಿಂದ ಬಂಟ್ವಾಳ ಪೊಲೀಸರ ಸಹಕಾರದೊಂದಿಗೆ ಬುಧವಾರ ರೂಟ್ ಮಾರ್ಚ್ ನಡೆಯಿತು.

ಚುನಾವಣಾ ಪೂರ್ವ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಮತದಾನದವರೆಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈ ಮಾರ್ಚ್ ಹಮ್ಮಿಕೊಳ್ಳಲಾಗಿದೆ. ಬಿ.ಸಿ.ರೋಡ್‍ನಿಂದ ಬಂಟ್ವಾಳ ನಗರ ಪೊಲೀಸ್ ಠಾಣೆಯವರೆಗೆ ರೂಟ್ ಮಾರ್ಚ್ ನಡೆಯಿತು.

ಸುರಕ್ಷಾ ಸೀಮಾ ಬಲದ ಸಹಾಯ ಕಮಾಂಡೆಡ್ ಮಾರುತಿ, ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್, ವೃತ್ತ ನಿರೀಕ್ಷಕ ಶರನ್ ಗೌಡ, ಬಂಟ್ವಾಳ ಸರ್ಕಲ್‍ನ ಪೊಲೀಸ್ ಸಿಬ್ಬಂದಿ, ಸುರಕ್ಷಾ ಸೀಮಾ ಬಲದ ಸಿಬ್ಬಂದಿ, ಪೊಲೀಸ್ ವಾಹನಗಳು ಫಥಸಂಚಲನದಲ್ಲಿ ಭಾಗವಹಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News