ಸುನ್ನೀ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್‌ನ ಪ್ರತಿನಿಧಿ ಸಮಾವೇಶ

Update: 2019-03-20 13:22 GMT

ಮಂಗಳೂರು, ಮಾ.20: ದ.ಕ. ಜಿಲ್ಲಾ ಸುನ್ನಿ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್‌ನ ಪ್ರತಿನಿಧಿ ಸಮಾವೇಶವು ಮಂಗಳವಾರ ನಗರದ ಐಎಂಎ ಹಾಲ್‌ನಲ್ಲಿ ಜರುಗಿತು.

‘ಸಂಘಟನೆಯ ಮಹತ್ವ’ದ ಕುರಿತು ಮಾತನಾಡಿದ ಐಎನ್‌ಸಿ ಅಂತಾರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಎಸ್.ಪಿ. ಹಂಝ ಸಖಾಫಿ ಧಾರ್ಮಿಕ ವಿಚಾರಗಳನ್ನು ಎಲ್ಲರ ಗಮನ ಸೆಳೆಯುವ ಉದ್ದೇಶಕ್ಕಾಗಿ ತರಗತಿಯನ್ನು ನಡೆಸಲಾಗುತ್ತದೆ. ಧಾರ್ಮಿಕ ಚೌಕಟ್ಟು ಮೀರದಂತೆ ಅದನ್ನು ಪಾಲಿಸಿಕೊಂಡು ಹೋಗುವ, ಧಾರ್ಮಿಕ ಕೇಂದ್ರ ಮತ್ತು ಶಿಕ್ಷಣದ ಬೆಳವಣಿಗೆಯ ದೃಷ್ಟಿಯಿಂದ ಮುಸ್ಲಿಮರು ಐಕ್ಯತೆಯ ಮೂಲಕ ಕಾರ್ಯಯೋಜನೆ ಮಾಡಬೇಕು. ಮಸೀದಿಗೆ ಸರಿಯಾಗಿ ಬಾರದ ಯುವಕರ ಮನೆಗೆ ತೆರಳಿ ಅವರನ್ನು ಜಮಾಅತ್‌ಗೆ ಬರುವ ಹಾಗೆ ಮಾಡುವ ಜವಾಬ್ದಾರಿ ಕೂಡಾ ಎಲ್ಲರ ಮೇಲಿದೆ ಎಂದರು.

ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ‘ಮೊಹಲ್ಲಾ ಸಬಲೀಕರಣ’ದ ಬಗ್ಗೆ ತರಗತಿ ನಡೆಸಿದರು. ಎಸ್‌ಜೆಎಂ ರಾಜ್ಯಾಧ್ಯಕ್ಷ ಆತೂರ್ ಸಅದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಎಂಎ ಜಿಲ್ಲಾಧ್ಯಕ್ಷ ಕತರ್ ಬಾವಾ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಎನ್‌ಎ ಅಬ್ದುಲ್ ರಹ್ಮಾನ್ ಮದನಿ, ಕೆ.ಕೆ.ಎಂ. ಕಾುಲ್ ಸಖಾಫಿ, ಮುಹಮ್ಮದ್ ಅಲೀ ಫೈಝಿ, ಪಿ.ಎಂ. ಮುಹಮ್ಮದ್ ಮದನಿ, ಬಶೀರ್ ಅಹ್ಮದ್ ಪಂಜಿಮೊಗರು, ಅಬ್ದುಲ್ ಹಮೀದ್ , ಮನ್ಸೂರ್ ಕೋಡಿ, ಅಹ್ಮದ್ ಬಾವಾ ಪಿಲಿಕೂರು, ಮೂಸಾ ಹಾಜಿ ಸಾಂಬಾರ್‌ತೋಟ, ಅಬ್ದುಲ್ ರಹ್ಮಾನ್ ಸಂಪಿಲ, ಉಮ್ಮರ್ ಮಾಸ್ಟರ್, ಬಶೀರ್ ಕಲ್ಕಟ್ಟ ಮತ್ತಿತರರು ಭಾಗವಹಿಸಿದ್ದರು.

ಇಬ್ರಾಹೀಂ ಖಲೀಲ್ ಮುಸ್ಲಿಯಾರ್ ಸ್ವಾಗತಿಸಿದರು. ಅಬ್ದುಲ್ ರಝಾಕ್ ಸಖಾಫಿ ವಂದಿಸಿದರು. ಇಸ್ಮಾಯೀಲ್ ಸಅದಿ ಉರುಮಣೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News