ಎಸೆಸೆಲ್ಸಿ ಪರೀಕ್ಷೆ: ಉಡುಪಿಯಲ್ಲಿ ಒಟ್ಟು 14,214 ವಿದ್ಯಾರ್ಥಿಗಳು

Update: 2019-03-20 14:50 GMT

ಉಡುಪಿ, ಮಾ. 20: ಜಿಲ್ಲೆಯ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಗಳು ಮಾ.21ರಿಂದ ಎ.4ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ 7,371 ಬಾಲಕರು ಹಾಗೂ 6,843 ಬಾಲಕಿಯರು ಸೇರಿದಂತೆ ಒಟ್ಟು 14,214 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ.

ಇವರಲ್ಲಿ 13,103 ಮಂದಿ ರೆಗ್ಯುಲರ್ (6,588 ಬಾಲಕರು, 6,515 ಬಾಲಕಿಯರು) ವಿದ್ಯಾರ್ಥಿಗಳು. ಇನ್ನು ಖಾಸಗಿ 404ಮಂದಿ ಮತ್ತು ಪುನರಾವರ್ತಿತರು 583 ಮಂದಿಯೂ ಪರೀಕ್ಷೆ ಬರೆಯಲಿದ್ದಾರೆ.

ಜಿಲ್ಲೆಯಲ್ಲಿ ಬೈಂದೂರು ವಲಯದಲ್ಲಿ 8, ಕುಂದಾಪುರ ವಲಯದಲ್ಲಿ 8, ಬ್ರಹ್ಮಾವರ ವಲಯದಲ್ಲಿ 11,ಉಡುಪಿ ವಲಯದಲ್ಲಿ 15 ಹಾಗೂ ಕಾಪು ವಲಯದಲ್ಲಿ 9 ಪರೀಕ್ಷಾ ಕೇಂದ್ರಗಳಿವೆ. ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ 49 ಸಾಮಾನ್ಯ ಹಾಗೂ ಎರಡು ಖಾಸಗಿ. ಈ 51 ಪರೀಕ್ಷಾ ಕೇಂದ್ರಗಳ 438 ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿಯನ್ನು ಅಳವಡಿಸಲಾಗಿದೆ ಎಂದು ಡಿಡಿಪಿಐ ಕಚೇರಿಯಿಂದ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News