ಎನ್‍ಎಂಎಂಎಸ್ ಪರೀಕ್ಷಾ ಫಲಿತಾಂಶ : ಹಾರಾಡಿ ಶಾಲೆಯ ಕಶ್ಯಪ್, ಮಹಮ್ಮದ್ ರಯೀಸ್ ಆಯ್ಕೆ

Update: 2019-03-20 15:02 GMT

ಪುತ್ತೂರು: ಪ್ರಸಕ್ತ ವರ್ಷದ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಾದ ನ್ಯಾಶನಲ್ ಮೀನ್ಸ್ ಕಂ ಮೆರಿಟ್ ಸ್ಕಾಲರ್ ಶಿಪ್ (ಎನ್‍ಎಂಎಂಎಸ್) ಇದರ ಫಲಿತಾಂಶ ಪ್ರಕಟಗೊಂಡಿದ್ದು ಎನ್‍ಎಂಎಂಎಸ್ ವಿದ್ಯಾರ್ಥಿ ವೇತನಕ್ಕಾಗಿ ಪುತ್ತೂರು ತಾಲೂಕಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯ ಎಂಟನೇ ತರಗತಿಯ ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳಾದ ಕಶ್ಯಪ್ ಡಿ ಜಿ. ಹಾಗೂ ಮಹಮ್ಮದ್ ರಯೀಸ್ ಆಯ್ಕೆಯಾಗಿರುತ್ತಾರೆ.

ಒಂಭತ್ತನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ ವರೆಗೆ ಪ್ರತಿ ತಿಂಗಳು ತಲಾ ಒಂದು ಸಾವಿರದಂತೆ ವಿದ್ಯಾರ್ಥಿವೇತನವನ್ನು ಈ ವಿದ್ಯಾರ್ಥಿಗಳು ಪಡೆದುಕೊಳ್ಳಲಿದ್ದಾರೆ. 

ಕಶ್ಯಪ್ ಡಿ.ಜಿ. ಅವರು ಪುತ್ತೂರು ತಾಲೂಕಿನ ಕಬಕ ಗ್ರಾಮದ ಕೆದುವಡ್ಕ ನಿವಾಸಿಗಳಾದ ದಿನೇಶ್ ಆಚಾರ್ಯ ಹಾಗೂ ಗಾಯತ್ರಿ ದಂಪತಿಗಳ ಪುತ್ರನಾಗಿದ್ದು, ಮಹಮ್ಮದ್ ರಯೀಸ್ ಅವರು ಪುತ್ತೂರು ತಾಲೂಕಿನ ಬಪ್ಪಳಿಗೆ ನಿವಾಸಿಗಳಾದ ಅಬ್ದುಲ್ ರಹಿಮಾನ್ ಹಾಗೂ ಹಸ್ಮಾ .ಕೆ ದಂಪತಿಗಳ ಪುತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News