ಅಯೋಧ್ಯೆ ವಿವಾದದ ಹಿಂದೂ-ಮುಸ್ಲಿಂ ಅರ್ಜಿದಾರರಿಂದ ಒಟ್ಟಿಗೆ ಹೋಳಿ ಆಚರಣೆ

Update: 2019-03-20 15:14 GMT
ಫೋಟೊ ಕೃಪೆ: ANI

ಅಯೋಧ್ಯೆ, ಮಾ.20: ಅಯೋಧ್ಯೆ-ಬಾಬರಿ ಮಸೀದಿ ವಿವಾದದ ಅರ್ಜಿದಾರರಾದ ಇಕ್ಬಾಲ್ ಅನ್ಸಾರಿ ಮತ್ತು ಮಹಂತ್ ಧರಂದಾಸ್ ಅವರು ಬುಧವಾರ ಒಟ್ಟಾಗಿ ಹೋಳಿ ಹಬ್ಬವನ್ನಾಚರಿಸಿದರು.

“ಸೂಕ್ತ ಫಲಿತಾಂಶವೊಂದನ್ನು ಪಡೆಯಲು, ತಪ್ಪು ತಿಳುವಳಿಕೆಗಳು ಇರಬಾರದು. ಇದರ ಆಧಾರದಲ್ಲೇ ತಮ್ಮ ವೋಟ್ ಬ್ಯಾಂಕ್ ತುಂಬಿಸುತ್ತಿರುವವರು ಅವರ ತಂತ್ರಗಳು ಇಲ್ಲಿ ನಡೆಯುವುದಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು. ಧರ್ಮ, ಜಾತಿ, ದೇವಸ್ಥಾನ ಅಥವಾ ಮಸೀದಿಗಳ ಹೆಸರುಗಳಲ್ಲಿ ರಾಜಕೀಯವಿರಬಾರದು ಎನ್ನುವ ಸಂದೇಶವನ್ನು ಜಗತ್ತಿಗೆ ನೀಡಬಯಸುತ್ತೇವೆ” ಎಂದು ಇಕ್ಬಾಲ್ ಅನ್ಸಾರಿ ಹೇಳಿದರು.

“ಸಹೋದರತ್ವದ ಭಾವನೆಯನ್ನು ಉಳಿಸಿಕೊಳ್ಳಲು ನಾವು ನಮ್ಮ ಸಹೋದರರೊಡನೆ ಹೋಳಿ ಆಡಿದೆವು. ಎರಡೂ ಬಣ್ಣಗಳು ಒಂದಕ್ಕೊಂದು ಬೆರೆಯುವ ಹಾಗೆ ನಾವು ಸಹೋದರರು ಬೆರೆತಿದ್ದೇವೆ” ಎಂದವರು ಹೇಳಿದರು.

“ಮಾನವೀಯತೆ ನಮ್ಮ ಆದ್ಯತೆ. ಮತಗಳಿಗಾಗಿ ನಿಮಗೆ ನಮ್ಮನ್ನು ವಿಭಜಿಸಲಾಗದು. ಒಂದಾಗಿ ಇರುವುದೇ ನಮ್ಮ ಗುರಿ” ಎಂದು ಮಹಾಂತ್ ಧರಂದಾಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News