ಎಸೆಸೆಲ್ಸಿ ಪರೀಕ್ಷೆ: ಬಂಟ್ವಾಳ ತಾಲೂಕಿನಲ್ಲಿ 5,625 ವಿದ್ಯಾರ್ಥಿಗಳು

Update: 2019-03-20 16:33 GMT

ಬಂಟ್ವಾಳ, ಮಾ. 20: 2018-19 ಸಾಲಿನ ಎಸೆಸೆಲ್ಸಿ ಪರೀಕ್ಷೆಗೆ  ತಾಲೂಕಿನಲ್ಲಿ ಒಟ್ಟು 17 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 5,625 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರತೀ ಕೇಂದ್ರಗಳಿಗೊಬ್ಬರಂತೆ ಮುಖ್ಯ ಅಧೀಕ್ಷಕರನ್ನು ನೇಮಿಸಲಾಗಿದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ತಿಳಿಸಿದ್ದಾರೆ.

9 ಮಂದಿ ಉಪಮುಖ್ಯ ಅಧೀಕ್ಷರಿದ್ದಾರೆ. 17 ಕಸ್ಟೋಡಿಯನ್ ಹಾಗೂ 350 ಮಂದಿ ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಸ್ಥಾನಿಕ ದಳದಲ್ಲಿ 25 ಮಂದಿಯಿದ್ದು, ವಿವಿಧ ತಂಡಗಳಲ್ಲಿ ತಾಲೂಕಿನಾದ್ಯಂತ ನಿಗಾವಹಿಸಲಿದ್ದಾರೆ. 

ಪರೀಕ್ಷಾ ಕೇಂದ್ರಗಳಲ್ಲಿ ಅತೀ ಅಗತ್ಯದ  ಮೂಲಭೂತ ಸೌಕರ್ಯಗಳಾದ ಆಸನ ವ್ಯವಸ್ಥೆ, ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

ಪರೀಕ್ಷಾ ಅವ್ಯವಹಾರ ಹಾಗೂ ಅಕ್ರಮವನ್ನು ತಡೆಗಟ್ಟುವ ಸಲುವಾಗಿ ಸೆಕ್ಷನ್ 144, ಸೂಕ್ತ ಪೆÇಲೀಸ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಸಿಸಿ ಕ್ಯಾಮರಾ ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪ್ರತೀ ಪರೀಕ್ಷಾ ಕೇಂದ್ರದಲ್ಲಿ ವೈದ್ಯಕೀಯ ಸೌಲಭ್ಯವನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಎಎನ್‍ಎಂಗಳ ಮೂಲಕ ಕಲ್ಪಿಸಲಾಗಿದೆ ಎಂದರು.  

ಎಸೆಸೆಲ್ಸಿ ಪರೀಕ್ಷೆಯು ಪೂರ್ವಾಹ್ನ 9.30ರಿಂದ ಪ್ರಾರಂಭಗೊಳ್ಳಲಿದ್ದು, ಮಾ. 21 ರಂದು ಕನ್ನಡ, 25 ರಂದು ಗಣಿತ, 27 ರಂದು ಇಂಗ್ಲೀಷ್, 29 ರಂದು ಸಮಾಜ, ಎ.2 ರಂದು ವಿಜ್ಞಾನ ಹಾಗೂ ಎ.4 ರಂದು ಹಿಂದಿ ಪರೀಕ್ಷೆಗಳು ನಡೆಯಲಿದ್ದು, ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಗಿದೆ.

ತಾಲೂಕಿನ 17 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಸುಗಮವಾಗಿ ನಡೆಯಲು ಸಕಲ ಸಿದ್ಧತೆ ಪೂರ್ಣವಾಗಿದೆ. ವಿನೂತನವಾಗಿ ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಗಳು ತಯಾರಿ ನಡೆಸಿದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News