ಕಿನ್ನಿಮುಲ್ಕಿ: ಮತದಾನದ ಪ್ರತಿಜ್ಞಾ ವಿಧಿ ಸ್ವೀಕಾರ

Update: 2019-03-21 15:40 GMT

ಉಡುಪಿ, ಮಾ. 21: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನದ ಹಕ್ಕು ಉಳ್ಳ ಎಲ್ಲರೂ ಚುನಾವಣೆಯಲ್ಲಿ ನಿರ್ಬಿತಿಯಿಂದ ಬಾಗವಹಿಸುವ ಬಗ್ಗೆ ಇತ್ತೀಚೆಗೆ ಕಿನ್ನಿಮೂಲ್ಕಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಸ್ವೀಪ್ ಕಾರ್ಯಕ್ರಮದ ಅಂಗವಾಗಿ ನಿಲಯದ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ವಿಧಿಯನ್ನು ಉಡುಪಿ ನಿವೃತ್ತ ಉಪ ನೋಂದಣಾಧಿಕಾರಿ ಪರಮೇಶ್ವರ ಬೋಧಿಸಿದರು.

ಈ ಸಂದರ್ಭದಲ್ಲಿ ಮತದಾನದ ಮಹತ್ವವನ್ನು ತಿಳಿಸಿದ ಅವರು ನಿರ್ಭಿತಿ ಯಿಂದ ಮತದಾನ ಮಾಡುವಂತೆ ಕರೆ ನೀಡಿದರಲ್ಲದೇ, ವಿದ್ಯಾರ್ಥಿಗಳ ಹೆತ್ತವರಿಗೂ ಮತದಾನದ ಮಹ್ವವನ್ನು ತಿಳಿಸುವಂತೆ ಸೂಚಿಸಿದರು.

ವಿದ್ಯಾರ್ಥಿ ನಿಲಯದ ನಿಲಯ ಮೇಲ್ವಿಚಾರಕಿ ಸುನೀತಾ ವಿದ್ಯಾರ್ಥಿಗಳಿಗೆ ಅಂಚೆ ಕಾರ್ಡ್ ಮೂಲಕ ಮತದಾನದ ಜಾಗೃತಿಯನ್ನು ಮೂಡಿಸುವ ಕುರಿತು ಮಾಹಿತಿ ನೀಡಿದರು. ಅರ್ಚನಾ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News