ಮಾ.24: ತೆಂಕನಿಡಿಯೂರು ಕಾಲೇಜಿನಲ್ಲಿ ಹತ್ರಾವಧಿ

Update: 2019-03-21 15:44 GMT

ಉಡುಪಿ, ಮಾ. 21: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಆರಂಭಿಸಿ 10 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕಾಲೇಜು ಕನ್ನಡ ವಿಭಾಗವು ಈವರೆಗೆ ಬೋಧಿಸಿದ ಉಪನ್ಯಾಸಕರು, ಹಳೆ ವಿದ್ಯಾರ್ಥಿ ಗಳು ಮತ್ತು ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ಮಾ.24ರ ರವಿವಾರ ಬೆಳಗ್ಗೆ 9:30ಕ್ಕೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದೆ.

ಕನ್ನಡ ವಿದ್ಯಾರ್ಥಿಗಳ ಕೂಡು ಕಲರವದ ಈ ಹತ್ರಾವದಿ ಕಾರ್ಯಕ್ರಮವನ್ನು ಸಂಸ್ಕೃತಿ ಚಿಂತಕ ಡಾ.ನಟರಾಜ್ ಎಸ್. ಬೂದಾಳು ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಮೂರು ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿದ್ದು, ಡಾ.ನಟರಾಜ ಬೂದಾಳ್ ‘ಕನ್ನಡ ಮೀಮಾಂಸೆ’ ಕುರಿತು, ಡಾ.ಪೂವಪ್ಪ ಕಣಿಯೂರು ‘ನೆಲಮೂಲ ನಾಗಾರಾಧನೆ’ ಕುರಿತು ಹಾಗೂ ಡಾ. ನರೇಂದ್ರ ರೈ ದೇರ್ಲ ‘ಕೃಷಿ, ಬಹುತ್ವ ಮತ್ತು ಬದುಕು’ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News