ಎ.1ರಿಂದ ಮಕ್ಕಳ ಬೇಸಿಗೆ ಈಜು ಶಿಬಿರ

Update: 2019-03-21 16:03 GMT

ಉಡುಪಿ, ಮಾ.21: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಹಾಗೂ ಮಾಹೆಯ ಆಶ್ರಯದಲ್ಲಿ ಪ್ರತಿ ವರ್ಷದಂತೆ ಬೇಸಿಗೆ ರಜಾದಿನ ಈಜು ತರಬೇತಿ ಶಿಬಿರ ಎ.1ರಿಂದ ಮೇ 15ರವರೆಗೆ ನುರಿತ ಈಜು ತರಬೇತಿದಾರರಿಂದ ನಡೆಯಲಿದೆ.

ಎಂಐಟಿ ಈಜು ಕೊಳದಲ್ಲಿ ನಡೆಯುವ ಈ ಈಜು ತರಬೇತಿಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಭಾಗವಹಿಸಲಿಚ್ಛಿಸುವ ಮಕ್ಕಳು ತಮ್ಮ ಹೆಸರುಗಳನ್ನು ಎಂಐಟಿಯ ದೈಹಿಕ ಶಿಕ್ಷಣ ನಿರ್ದೇಶಕರಲ್ಲಿ ನೊಂದಾಯಿಸಿಕೊಳ್ಳ ಬಹುದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News