ಆಕ್ಸ್‌ಫರ್ಡ್ ಡಿಕ್ಷನರಿ ತಲುಪಿದ ‘ಚಡ್ಡಿ’ !

Update: 2019-03-21 17:34 GMT

ಲಂಡನ್, ಮಾ. 21: ಭಾರತೀಯ ಒಳ ಉಡುಪು ‘ಚಡ್ಡಿ’ ಈಗ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ! ‘ಚಡ್ಡೀಸ್’ (=======chuddies======) ಹೊಸದಾಗಿ ‘ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿ’ಯಲ್ಲಿ ಸ್ಥಾನ ಪಡೆದಿದೆ.

ಬ್ರಿಟಿಶ್ ಆಡಳಿತದ ಅವಧಿಯ ಹಲವಾರು ಗಝೆಟ್‌ಗಳು ಮತ್ತು ಪತ್ರಿಕೆಗಳಲ್ಲಿ ಈ ಪದವನ್ನು ಬಳಸಲಾಗಿತ್ತು. ಆದರೆ, 1990ರ ದಶಕದ ಮಧ್ಯಭಾಗದಲ್ಲಿ ಬಿಬಿಸಿ ಟೆಲಿವಿಶನ್‌ ನಲ್ಲಿ ಪ್ರಸಾರಗೊಂಡ ಜನಪ್ರಿಯ ಬ್ರಿಟಿಶ್-ಏಶ್ಯನ್ ಕಾಮಿಡಿ ಧಾರಾವಾಹಿಯಲ್ಲಿ ಈ ಪದ ಬಳಕೆಯಾದ ಬಳಿಕ ಅದು ಪ್ರಸಿದ್ಧಿಗೆ ಬಂತು.

ಈ ಸರಣಿಯಲ್ಲಿ ‘ಕಿಸ್ ಮೈ ಚಡ್ಡೀಸ್’ ಎಂಬ ಪದಪುಂಜವನ್ನು ನಟ ಸಂಜೀವ್ ಭಾಸ್ಕರ್ ಬಳಸಿದರು. ಈ ಹಿನ್ನೆಲೆಯಲ್ಲಿ, ಈ ಪದ ಜನಪ್ರಿಯಗೊಂಡಿತು ಹಾಗೂ ಪ್ರಧಾನವಾಹಿನಿಯ ಮಾತಿಗೆ ಸೇರ್ಪಡೆಗೊಂಡಿತು.

ಈ ಪದವನ್ನು ಮೊದಲು 1858ರಲ್ಲಿ ಬ್ಲಾಕ್‌ವುಡ್‌ರ ಎಡಿನ್‌ಬರ್ಗ್ ಮ್ಯಾಗಝಿನ್ ಹಾಗೂ 1885ರಲ್ಲಿ ಗಝೆಟಿಯರ್ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಬಳಸಲಾಗಿತ್ತು ಎಂಬುದಾಗಿ ಡಿಕ್ಶನರಿ ಹೇಳುತ್ತದೆ.

ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಶನರಿಯ ಮಾರ್ಚ್ ಪರಿಷ್ಕೃತ ಆವೃತ್ತಿಯಲ್ಲಿ 650 ನೂತನ ಪದಗಳನ್ನು ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News