2ನೇ ಮಹಾಯುದ್ಧ ಕಾಲದ ಅಮೆರಿಕ ಯುದ್ಧನೌಕೆ ಪೆಸಿಫಿಕ್ ಸಾಗರದಲ್ಲಿ ಪತ್ತೆ

Update: 2019-03-21 17:11 GMT

ಹೊನಿಯರ (ಸೋಲೊಮನ್ ಐಲ್ಯಾಂಡ್ಸ್), ಮಾ. 21: 1942ರಿಂದ ನಾಪತ್ತೆಯಾಗಿದ್ದ ಅಮೆರಿಕದ ವಿಮಾನವಾಹಕ ಯುದ್ಧನೌಕೆ ‘ಯುಎಸ್‌ಎಸ್ ವಾಸ್ಪ್’ ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಸುಮಾರು 14,000 ಅಡಿ ಆಳದಲ್ಲಿ ಪತ್ತೆಯಾಗಿದೆ.

ರಿಮೋಟ್ ಕಂಟ್ರೋಲರ್ ಶೋಧದ ವೇಳೆ, ಹಡಗಿನ ಅಡಿಭಾಗ ಗೋಚರಿಸಿದ ಬಳಿಕ ಹಡಗು ಪತ್ತೆಯಾಯಿತು.

ಇಲ್ಲಿಗೆ ಸಮೀಪದಲ್ಲೇ ಇತ್ತೀಚೆಗೆ ಎರಡನೇ ಮಹಾಯುದ್ಧ ಕಾಲದ ಇನ್ನೊಂದು ಯುದ್ಧನೌಕೆ ‘ಯುಎಸ್‌ಎಸ್ ಹಾರ್ನೆಟ್’ ಪತ್ತೆಯಾಗಿರುವುದನ್ನು ಸ್ಮರಿಸಬಹುದಾಗಿದೆ.

ಮೈಕ್ರೊಸಾಫ್ಟ್ ಸ್ಥಾಪಕ ದಿವಂಗತ ಪೌಲ್ ಅಲನ್ ಸಹಯೋಗದಲ್ಲಿ ಶೋಧ ನೌಕೆ ‘ಪೆಟ್ರೆಲ್’ ಸೋಲೊಮನ್ ದ್ವೀಪದಲ್ಲಿ ಅಮೆರಿಕ, ಬ್ರಿಟನ್, ಜಪಾನ್ ಮತ್ತು ಇಟಲಿ ನೌಕಾಪಡೆಗಳ ಹಲವಾರು ನೌಕೆಗಳನ್ನು ಪತ್ತೆಮಾಡಿರುವುದನ್ನು ಸ್ಮರಿಸಬಹುದಾಗಿದೆ.

ಮುಳುಗಿರುವ ನೌಕೆಗಳು ನಾವಿಕರ ‘ಪೂಜನೀಯ ಗೋರಿ’ಗಳು ಎಂಬುದಾಗಿ ಪರಿಗಣಿಸಿ ಅವುಗಳನ್ನು ಅಲ್ಲೇ ಬಿಡುವ ಅಮೆರಿಕ ನೌಕಾಪಡೆಯ ನೀತಿಯಂತೆ, ‘ಯುಎಸ್‌ಎಸ್ ವಾಸ್ಪ್’ನ ಅವಶೇಷಗಳು ಸಮುದ್ರದಡಿಯಲ್ಲೇ ಉಳಿಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News