ಮಂಗಳೂರು: ವಿದೇಶಿ ಚಿನ್ನ ಸಾಗಾಟ ಮಾಡುತ್ತಿದ್ದವ ಸೆರೆ

Update: 2019-03-21 17:14 GMT

ಮಂಗಳೂರು, ಮಾ.21: ಬಜ್ಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಶುದ್ಧ 24 ಕ್ಯಾರೆಟ್‌ನ 142.70 ಗ್ರಾಂ ತೂಕದ 4.65 ಲಕ್ಷ ರೂ ಮೌಲ್ಯದ ವಿದೇಶಿ ಚಿನ್ನ ಸಹಿತ ಒಬ್ಬ ಪ್ರಯಾಣಿಕನನ್ನು ವಶಪಡಿಸಿಕೊಂಡಿದ್ದಾರೆ.

ಮಾ.19ರಂದು ದುಬೈನಿಂದ ಸ್ಪೈಸ್ ಜೆಟ್ ಎಸ್‌ಜಿ 60 ವಿಮಾನದಲ್ಲಿ ಆಗಮಿಸಿದ ವ್ಯಕ್ತಿ, ಪಾದರಸ ಲೇಪನೆ ಮಾಡಿದ 32 ಚಿನ್ನದ ತುಂಡುಗಳನ್ನು ನಾಲ್ಕು ಮ್ಯಾಗ್ನೆಟಿಕ್ ಬ್ರಾಸ್‌ಲೆಟ್‌ಗಳಲ್ಲಿ ಅಡಗಿಸಿಟ್ಟು ಸಾಗಿಸಲು ಯತ್ನಿಸುವ ವೇಳೆ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾ.3, 4, 9,11,16ರಂದು ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರನ್ನು ತಪಾಸಣೆ ಮಾಡುವ ವೇಳೆ ವಿದೇಶಿ ಚಿನ್ನಾಭರಣವನ್ನು ಸಾಗಾಟ ಮಾಡುವ ಜಾಲವನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಿದ್ದರೂ ಸಾಗಾಟ ಜಾಲ ಸಕ್ರಿಯವಾಗಿರುವುದು ಗಮನಾರ್ಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News