ಕೆನಡ ಸಂಸತ್ತಿನಲ್ಲಿ ಮೊದಲ ಬಿಳಿಯೇತರ ವಿಪಕ್ಷ ನಾಯಕ

Update: 2019-03-21 17:15 GMT

ಒಟ್ಟಾವ (ಕೆನಡ), ಮಾ. 21: ಕೆನಡದ ಸಂಸತ್ತು ಹೌಸ್ ಆಫ್ ಕಾಮನ್ಸ್‌ನಲ್ಲಿ ಮೊದಲ ಬಿಳಿಯೇತರ ಪ್ರತಿಪಕ್ಷ ನಾಯಕ ಆಗುವ ಮೂಲಕ ಭಾರತ ಮೂಲದ ಜಗ್ಮೀತ್ ಸಿಂಗ್ ಇತಿಹಾಸವೊಂದನ್ನು ಸೃಷ್ಟಿಸಿದ್ದಾರೆ.

ನ್ಯೂ ಡೆಮಾಕ್ರಟಿಕ್ ಪಾರ್ಟಿಯ ನಾಯಕ ಜಗ್ಮೀತ್ ಸಿಂಗ್, ದೈನಂದಿನ ಪ್ರಶ್ನೋತ್ತರ ಅವಧಿಗಾಗಿ ಹೌಸ್ ಆಫ್ ಕಾಮನ್ಸ್‌ಗೆ ಹೋಗುವಾಗ ಕೈಯನ್ನು ಎದೆಯ ಮೇಲಿಟ್ಟುಕೊಂಡು ನಡೆದರು.

ಫೆಬ್ರವರಿ 25ರಂದು ನಡೆದ ಫೆಡರಲ್ ಉಪಚುನಾವಣೆಯಲ್ಲಿ ಅವರು ಆಯ್ಕೆಗೊಂಡಿದ್ದಾರೆ.

ಕ್ರೈಸ್ಟ್‌ಚರ್ಚ್ ಸಂತ್ರಸ್ತರಿಗೆ ಶ್ರದ್ಧಾಂಜಲಿ

ಸದನದ ಪ್ರತಿಪಕ್ಷ ನಾಯಕರಾಗಿ ಮೊದಲ ಭಾಷಣ ಮಾಡಿದ ವೇಳೆ ಅವರು, ನ್ಯೂಝಿಲ್ಯಾಂಡ್ ಮಸೀದಿಗಳಲ್ಲಿ ನಡೆದ ಹತ್ಯಾಕಾಂಡದ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

‘‘ಕ್ರೈಸ್ಟ್‌ಚರ್ಚ್‌ನ ಮಸೀದಿಗಳಲ್ಲಿ ನಡೆದ ಮುಸ್ಲಿಮ್ ಸಹೋದರ ಸಹೋದರಿಯರ ಹತ್ಯೆಯ ಶೋಕದಲ್ಲಿರುವ ನ್ಯೂಝಿಲ್ಯಾಂಡ್ ಜನತೆಯೊಂದಿಗೆ ನಾನಿದ್ದೇನೆ ಎಂದು ಹೇಳುವ ಮೂಲಕ ನಾನು ಭಾಷಣವನ್ನು ಆರಂಭಿಸುತ್ತೇನೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News