ಪ್ರಾಮಾಣಿಕ ಶಿಕ್ಷಕ ವೃತ್ತಿಗೆ ನಿವೃತ್ತಿ ಇಲ್ಲ: ಹಾಜಿ ಅಬ್ದುರ್ರಶೀದ್ ಉಳ್ಳಾಲ

Update: 2019-03-21 17:36 GMT

ಉಳ್ಳಾಲ, ಮಾ.21: ಶಿಕ್ಷಕ ವೃತ್ತಿಯು ಪವಿತ್ರವಾದುದು ಮತ್ತು ಶಿಕ್ಷಕರು ತಮ್ಮ ಬಳಿಗೆ ಬರುವ ಪ್ರತಿಯೊಂದು ಮಗುವಿನಲ್ಲೂ ಹೊಸತನವನ್ನು ಕಾಣುವರು. ತಾನು ಶಿಕ್ಷಕ ವೃತ್ತಿ ಪ್ರಾರಂಭಿಸಿದಗಿನಿಂದ ತನ್ನ ನಿವೃತ್ತಿಯವರೆಗೆ ತನ್ನ ಬಳಿ ಬರುತ್ತಿರುವ ಪ್ರತಿಯೊಂದು ವಿದ್ಯಾರ್ಥಿಯಲ್ಲೂ ತನ್ನ ಮಕ್ಕಳನ್ನು ಕಾಣುವ ಶಿಕ್ಷಕ ವೃತ್ತಿಗೆ ನಿವೃತ್ತಿಯೇ ಇಲ್ಲ ಎಂದು ಉಳ್ಳಾಲ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಉಳ್ಳಾಲ ಹೇಳಿದರು.

ಉಳ್ಳಾಲ ಕ್ಲಸ್ಟರ್ ವತಿಯಿಂದ ನಡೆದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಟಿಪ್ಪುಸುಲ್ತಾನ್ ವಿದ್ಯಾ ಸಂಸ್ಥೆಯಿಂದ ನಿವೃತ್ತಿಯಾದ ಆಲಿಸ್ ಮೊಂತೇರೋ ಹಾಗೂ ಸೀತಾ ಮತ್ತು ಬಿಎಂ ವಿದ್ಯಾ ಸಂಸ್ಥೆಯಿಂದ ನಿವೃತ್ತರಾದ ಸಿಂಥಿಯಾ ಲಸ್ರಾದೋ, ಕ್ಲಮೆಂಟಿನಾ ಪ್ರಭಾವತಿ, ವಿಮಲಾ ಮಾರ್ಗರೇಟ್ ಕರ್ಕೇರಾ, ನೂತನ್ ಜ್ಯೋತಿ ಅವರನ್ನು ಉಳ್ಳಾಲ ಪುರಾಸಭೆಯ ಪೌರಾಯುಕ್ತೆ ವಾಣಿ ವಿ.ಆಳ್ವ ಸನ್ಮಾನಿಸಿದರು. 

ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಟಿಪ್ಪುಸುಲ್ತಾನ್ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಎಂ.ಎಚ್. ಮಲಾರ್ ಹಾಗೂ ಬಿಎಂ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ನಳಿನಿ ಅಮ್ಮನ್ನ, ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕೆ.ಎಂ.ಕೆ. ಮಂಜನಾಡಿ, ಮೊಗವೀರ ಶಾಲೆಯ ಮುಖ್ಯ ಶಿಕ್ಷಕಿ ವೇದಾವತಿ, ಸರಕಾರಿ ಮಾದರಿ ಹಿಪ್ರಾ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾವತಿ, ಮೇಲಂಗಡಿ ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಮೋನಿಕಾ ಮಸ್ಕರೇನಸ್, ಒಂಬತುಕೆರೆಯ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾ, ಸರಕಾರಿ ಉರ್ದು ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಉಪಸ್ಧಿತರಿದ್ದರು.

ಉಳ್ಳಾಲ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ನಳಿನಿ ಸ್ವಾಗತಿಸಿದರು. ಒಂಬತ್ತುಕೆರೆ ಶಾಲೆಯ ಸಹಾಯಕ ಶಿಕ್ಷಕಿ ಮೋನಿ ವಂದಿಸಿದರು. ಮೊಗವೀರ ಶಾಲೆಯ ಶಿಕ್ಷಕಿ ವೀಣಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News