ಜೈಲಿನಲ್ಲೇ ಹೋಳಿ ಹಬ್ಬ ಆಚರಿಸಿಕೊಂಡ ನೀರವ್ ಮೋದಿ.. !

Update: 2019-03-22 06:06 GMT

ಲಂಡನ್, ಮಾ.22: ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ವಂಚಿಸಿ ಲಂಡನ್ ಗೆ  ಪರಾರಿಯಾಗಿ  ಇದೀಗ ಜೈಲು ಸೇರಿರುವ ವಿತ್ತಾಪರಾಧಿ ನೀರವ್ ಮೋದಿ  ಇಂಗ್ಲೆಂಡ್ ನ ಜೈಲಿನಲ್ಲೇ ಹೋಳಿ ಹಬ್ಬವನ್ನು ಆಚರಿಸಿಕೊಂಡಿದ್ದಾನೆ.

ನೀರವ್ ಮೋದಿ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವ ಹಿನ್ನೆಲೆಯಲ್ಲಿ ಮಾರ್ಚ್  29ರ ತನಕ ಪೊಲೀಸ್ ಕಸ್ಟಡಿಯಲ್ಲಿ ಇರಬೇಕಾಗಿದೆ.

ಲಂಡನ್ ನ  ಬ್ಯಾಂಕ್ ಒಂದರಲ್ಲಿ ಖಾತೆ ತೆರೆಯುವ ಯತ್ನದಲ್ಲಿದ್ದಾಗ ನೀರವ್  ಮೋದಿಯನ್ನು ಲಂಡನ್ ನ ಪೊಲೀಸರು ಬಂಧಿಸಿದ್ದರು. ಬಳಿಕ  ಬುಧವಾರ ವೆಸ್ಟ್ ಮಿನ್ಸ್ ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ , ನ್ಯಾಯಾಧೀಶ ಮೇರಿ ಮಾಲೋನ್ ಈತನಿಗೆ ಪೊಲೀಸ್ ಕಸ್ಟಡಿ ವಿಧಿಸಿದ್ದರು. ಜೈಲಿನಲ್ಲಿ ಪ್ರತ್ಯೇಕ  ಸೆಲ್ ಗಾಗಿ ಮೋದಿ ಮಾಡಿದ್ದ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದರು.

 ಅಕ್ರಮ ಲೇವಾದೇವಿ ಪ್ರಕರಣಕ್ಕೆ ಸಂಬಂಧಿಸಿ ಮೋದಿ  ವಿರುದ್ಧ ಸಿಬಿಐ ಕಳೆದ ವರ್ಷ  ರೆಡ್‌ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಅದರಂತೆ  ಲಂಡನ್ ಪೊಲೀಸರು ಈತನನ್ನು ಬಂಧಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News