ನಿಟ್ಟೆ: ಯೂಥ್ ಐಕಾನ್ ಸ್ಪರ್ಧೆಯಲ್ಲಿ ಪವನ್ ಭಂಡಾರ್‍ಕರ್ ಪ್ರಥಮ

Update: 2019-03-22 11:43 GMT

ಕಾರ್ಕಳ: ಐಸಿಟಿ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ನಡೆದ ಯೂಥ್ ಐಕಾನ್ ಸ್ಪರ್ಧೆಯಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಪವನ್ ಭಂಡಾರ್‍ಕರ್ ಪ್ರಥಮ ಸ್ಥಾನ ಗಳಿಸಿದ್ದಾರೆ. 

ಈ ಪ್ರಶಸ್ತಿಯ ಅಂಗವಾಗಿ ಪವನ್ ಭಂಡಾರ್‍ಕರ್‍ಗೆ ಸಿಂಗಾಪುರಕ್ಕೆ ವಿಶೇಷ ಶೈಕ್ಷಣಿಕ ಪ್ರವಾಸದ ಸೌಲಭ್ಯ ಐಸಿಟಿ ಅಕಾಡೆಮಿ ವತಿಯಿಂದ ಲಭಿಸಿದೆ. ಇತ್ತೀಚೆಗೆ ನಿಟ್ಟೆಯಲ್ಲಿ ನಡೆದ ರೀಜನಲ್ ರೌಂಡ್‍ನಲ್ಲಿ ಆಯ್ಕೆಯಾದ ಮೂವರು ವಿದ್ಯಾರ್ಥಿಗಳಲ್ಲಿ ಪವನ್ ಒಬ್ಬರಾಗಿದ್ದರು. ಕಳೆದ ವರ್ಷವೂ ಯೂಥ್ ಐಕಾನ್ ಪ್ರಶಸ್ತಿಯನ್ನು ನಿಟ್ಟೆ ಕಾಲೇಜು ತನ್ನ ಮುಡಿಗೇರಿಕೊಂಡಿತ್ತು. ಇದೀಗ ಸತತ ಎರಡನೇ ಬಾರಿ ಈ ಪ್ರಶಸ್ತಿಯನ್ನು ನಿಟ್ಟೆ ಕಾಲೇಜಿನ ವಿದ್ಯಾರ್ಥಿ ಗಳಿಸಿ, ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News