ಉಡುಪಿ ಮಲಬಾರ್‌ನಲ್ಲಿ ‘ಆರ್ಟಿಸ್ಟ್ರಿ’ ಬ್ರಾಡೆಂಡ್ ಜ್ಯುವೆಲ್ಲರಿ ಪ್ರದರ್ಶನ ಉದ್ಘಾಟನೆ

Update: 2019-03-22 11:57 GMT

ಉಡುಪಿ, ಮಾ.22: ನಗರದ ಗೀತಾಂಜಲಿ ಶೋಪರ್ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಮಳಿಗೆಯಲ್ಲಿ ಏಳು ದಿನಗಳ ಆರ್ಟಿಸ್ಟ್ರಿ ಬ್ರಾಡೆಂಡ್ ಕಲಾತ್ಮಕ ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು ನಟಿ ಪವಿತ್ರಾ ಶೆಟ್ಟಿ ಶುಕ್ರವಾರ ಉದ್ಘಾಟಿಸಿದರು.

ಉಡುಪಿಯಲ್ಲಿ ಸಾಕಷ್ಟು ಜ್ಯುವೆಲ್ಲರಿಗಳಿದ್ದು, ಅದರಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಾತ್ರ ತುಂಬಾ ವಿಶೇಷತೆಯನ್ನು ಹೊಂದಿದೆ. ಇಲ್ಲಿ ಉತ್ತಮ ಸೇವೆಯ ಜೊತೆ ಪ್ರೀತಿಯನ್ನು ಕೂಡ ತೋರಿಸುತ್ತಾರೆ. ಇದರಿಂದ ಮಲಬಾರ್ ನಮ್ಮದೇ ಕುಟುಂಬ ಎಂಬ ಭಾವನೆ ಮೂಡುತ್ತದೆ ಎಂದು ಪವಿತ್ರಾ ಶೆಟ್ಟಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಅನ್ಸಿಟ ಮೃದುಲ ಮಾಬೆನ್ ಮೈನ್ ಡೈಮಂಡ್ಸ್ ವೆಸ್ಟರ್ನ್ ಕಲೆಕ್ಷನ್, ಸೋನಿಯಾ ಶೆಟ್ಟಿ ಮೈನ್ ಡೈಮಂಡ್ಸ್ ಟ್ರೇಡಿಶನಲ್ ಕಲೆಕ್ಷನ್, ಸುಶ್ಮಿತಾ ಕಾಮತ್ ಡವೈನ್, ಪಲ್ಲವಿ ಸಂತೋಷ್ ಡಿವೈನ್ ನಕಾಶ, ಸುಶ್ಮಿತ ನಾಯಕ್ ಎಥಿನಿಕ್ಸ್, ಬೋಳ ಅವ್ನಿ ಕಾಮತ್ ಪ್ರೇಶಿಯ, ಲಕ್ಕಿ ಎನ್. ಶೆಟ್ಟಿ ಎರ ಆಭರಣಗಳನ್ನು ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು.

ಈ ಸಂದರ್ಭದಲ್ಲಿ ಉಡುಪಿ ಮಳಿಗೆಯ ಮುಖ್ಯಸ್ಥ ಹಫೀಝ್ ರೆಹಮಾನ್, ಮಂಗಳೂರು ಶೋರೂಂನ ಮುಖ್ಯಸ್ಥ ಶರತ್ ಚಂದ್ರನ್, ಮಾಡೆಲ್‌ಗಳಿಗೆ ಮೆಕಪ್ ಮಾಡಿದ ಎಡ್ನ ಜತನ್ ಮೊದಲಾದವರು ಉಪಸ್ಥಿತರಿದ್ದರು. ಲವಿತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್‌ನ ಸಬ್ ಬ್ರಾಂಡ್‌ಗಳಾದ ಮೈನ್(ವಜ್ರಾಭಾರಣಗಳು), ಎರ(ಅನ್‌ಕಟ್ ವಜ್ರಾಭರಣ ಗಳು), ಪ್ರೇಶಿಯ(ಅಮೂಲ್ಯ ರತ್ನಾಭರಣಗಳು), ಡಿವೈನ್(ಭಾರತೀಯ ಪಾರಂಪರಿಕ ಆಭರಣಗಳು), ಎಥಿನಿಕ್ಸ್(ಕರಕುಶಲ ವಿನ್ಯಾಸದ ಆಭರಣಗಳು), ಹಾಯ್ (ಮನಮೋಹಕ ಆಭರಣಗಳು), ಸ್ಟಾರ್ಲೆಟ್( ಮಕ್ಕಳ ಆಭರಣಗಳು) ಈ ಪ್ರಶನದ ಪ್ರಮುಖ ಆಕರ್ಷಣೆಯಾಗಿದೆ.

ಮಾ.28ರವರೆಗೆ ನಡೆಯುವ ಈ ಪ್ರದರ್ಶನದಲ್ಲಿ ವಿಶೇಷ ಕೊಡುಗೆಯಾಗಿ ಪ್ರತಿ ಗ್ರಾಂ ಚಿನ್ನಾಭರಣಗಳ ಮೇಕಿಂಗ್ ಚಾರ್ಜಸ್‌ನಲ್ಲಿ 125ರೂ. ಕಡಿತ ಮತ್ತು ವಜ್ರದ ವೌಲ್ಯದ ಮೇಲೆ ಶೇ.10ರಷ್ಟು ಕಡಿತ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News