ಭಟ್ಕಳ: ಬೆಂಗ್ರೆಯಲ್ಲಿ ವಿಶ್ವ ಜಲ ದಿನಾಚರಣೆ

Update: 2019-03-22 12:28 GMT

ಭಟ್ಕಳ: ಉಸಿರ ಇಂಡಸ್ಟ್ರಿ ಬೆಂಗ್ರೆ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ಬೆಂಗ್ರೆಯಲ್ಲಿ ವಿಶ್ವ ಜಲ ದಿನಾಚರಣೆ ಆಚರಿಸಲಾಯಿತು.
ಗಿಡಗಳಿಗೆ ಜಲ ಸಿಂಚನ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಭಟ್ಕಳ ಕ್ಷೇತ್ರ ಸಮನ್ವಯಾಧಿಕಾರಿ ಎಲ್ಲಮ್ಮ ಮರಿಸ್ವಾಮಿ ಮಾತನಾಡುತ್ತಾ ನೀರು ಸಕಲ ಜೀವರಾಶಿಗಳಿಗೆ ಅಮೂಲ್ಯವಾದದ್ದು ವಿಶ್ವದ ಎಲ್ಲಾ ಜನರಿಗೂ ಶುದ್ಧ ಕುಡಿಯುವ ನೀರು ಸಿಗುವಂತಾಗಬೇಕು ಎಂಬುದು ವಿಶ್ವ ಜಲ ದಿನದ ಆಶಯ ಎಂದು ತಿಳಿಸಿದರು. 

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಸಂಚಾಲಕ ಕೆ. ಮರಿಸ್ವಾಮಿ ಮಾತನಾಡುತ್ತಾ, ನಮ್ಮ ಬದುಕಿನಲ್ಲಿ ನೀರಿಲ್ಲದೆ ಏನನ್ನೂ ಮಾಡಲಾಗುವುದಿಲ್ಲ. ಭೂಮಿಯ ಮೇಲೆ ಶೇಕಡ 97 ಉಪ್ಪು ನೀರಿನಿಂದ ಕೂಡಿದೆ ಉಳಿದ ಶೇಕಡಾ ಮೂರರಷ್ಟು ಸಿಹಿಯಾಗಿದ್ದು ಇದರಲ್ಲಿ ಅತ್ಯಲ್ಪ ಪ್ರಮಾಣದ ನೀರು ಅಂತರ್ಜಲ ಮತ್ತು ವಾತಾವರಣದಲ್ಲಿ ಕಾಣಸಿಗುತ್ತದೆ ಜಲ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವೆಂದು ತಿಳಿಸಿದರು.

ಬೆಂಗ್ರೆ ಉಸಿರ ಇಂಡಸ್ಟ್ರೀಸ್ ನ ಉದ್ಯಮಿ ಹಾಗೂ ಜಲ ಶೋಧಕ ಎಂ ಡಿ ಮ್ಯಾಥ್ಯೂ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.  

ಕೆಡಿಸಿಸಿ ಸಮಾಜ ಸೇವಾ ಸಂಸ್ಥೆಯ ಪೆಲಿಕ್ಸ್ ಫರ್ನಾಂಡಿಸ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News