ಉಳ್ಳಾಲ: ಸಿಒಡಿಪಿ ವತಿಯಿಂದ ಸ್ವಚ್ಛತಾ ಅಭಿಯಾನ

Update: 2019-03-22 12:31 GMT

ಉಳ್ಳಾಲ: ಸಿ.ಒ.ಡಿ.ಪಿ. ಪ್ರವರ್ತಿತ ವಿಶ್ವಜ್ಯೋತಿ ಮಹಾಸಂಘದ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಪೆರ್ಮನ್ನೂರು ಪರಿಸರದಲ್ಲಿ ಇತ್ತೀಚೆಗೆ ಜರಗಿತು. 

ಉಳ್ಳಾಲ ನಗರಸಭೆಯ ಪೌರಾಯುಕ್ತೆ ವಾಣಿ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳಾ ದಿನಾಚರಣೆಯ ಬಗ್ಗೆ ಸಂದೇಶ ನೀಡಿದರು. ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪೆರ್ಮನ್ನೂರು ಸಂತ ಸೆಬೆಸ್ಟಿಯನ್  ಚರ್ಚ್‍ನ ಧರ್ಮಗುರು  ಡಾ ಜೆ.ಬಿ. ಸಲ್ದಾನರವರು, ಇಂತಹ ಕಾರ್ಯಕ್ರಮವನ್ನು  ಒಂದು ದಿನಕ್ಕೆ ಸೀಮಿತಗೊಳಿಸದೇ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಿ.ಒ.ಡಿ.ಪಿ. ನಿರ್ದೇಶಕ ಸ್ವಾಮಿ ಓಸ್ವಲ್ಡ್ ಮೊಂತೆರೊರವರು ದಿನಬಳಕೆಯ ಪ್ಲಾಸ್ಟಿಕ್‍ನಿಂದ  ಸಮಾಜ,ಪರಿಸರ ಮತ್ತು ಪ್ರಾಣಿಗಳ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪೆರ್ಮನ್ನೂರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್‍ಡಿಸೋಜ, ಕಾರ್ಯದರ್ಶಿ ರೊನಾಲ್ಡ್ ಫೆರ್ನಾಂಡೀಸ್, ಸಿ.ಒ.ಡಿ.ಪಿ ಸಂಯೋಜಕಿ ರೀಟಾಡಿಸೋಜ, ಕಾರ್ಯಕರ್ತೆ ಸಿಸಿಲಿಯಾ ಕುಟಿನ್ಹಾ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು, ಉಳ್ಳಾಲ ನಗರಸಭೆಯ ಸಿಬಂದಿಗಳು ಉಪಸ್ಥಿತರಿದ್ದರು.

ಮಹಾಸಂಘದ ಅಧ್ಯಕ್ಷ ಡೊಮಿನಕ್ ಆಲ್ವಿನ್ ಫೆರಾವೊ ಸ್ವಾಗತಿಸಿದರು. ಕಾರ್ಯದರ್ಶಿ ಸರಿತಾ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಪೌಲ್‍ಡಿಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News