​ಬಿಸಿಯೂಟ ಅಡುಗೆ ಕೊಠಡಿಗಳಿಗೆ ಸಿ.ಸಿ.ಕ್ಯಾಮರಾ ಅಳವಡಿಕೆಗೆ ಸಂಘದ ವಿರೋಧ

Update: 2019-03-22 12:52 GMT

ಮಂಗಳೂರು, ಮಾ.22: ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಸಿ.ಸಿ. ಕ್ಯಾಮರಾ ಅಳವಡಿಕೆಯ ಸಂದರ್ಭ ಕೆಲವು ಶಾಲೆಗಳ ಬಿಸಿಯೂಟ ತಯಾರು ಮಾಡುವ ಕೊಠಡಿಗಳಿಗೆ ಕೂಡ ಸಿ.ಸಿ. ಕ್ಯಾಮರಾ ಅಳವಡಿಸಿರುವುದಕ್ಕೆ ಕರ್ನಾಟಕ ರಾಜ್ಯ ಬಿಸಿಯೂಟ ನೌಕರರ ಸಂಘ (ರಿ) ಸಿಐಟಿಯು ದ.ಕ.ಜಿಲ್ಲಾ ಸಮಿತಿಯು ತೀವ್ರ ವಿರೋಧ ವ್ಯಕ್ತಪಡಿಸಿದೆ.

ಬಿಸಿಯೂಟ ತಯಾರು ಮಾಡುವ ಕೆಲಸಗಾರರು ಶೇ.ನೂರರಷ್ಟು ಮಹಿಳೆಯರಾಗಿದ್ದು ಅವರ ಉಡುಗೆ ತೊಡುಗೆಗಳನ್ನು ಬದಲಾಯಿಸುವುದು ಹಾಗೂ ಕೆಲಸ ಮಾಡುವ ಸಂದರ್ಭ ಈ ಸಿ.ಸಿ. ಕ್ಯಾಮರಾವನ್ನು ದುರ್ಬಳಕೆ ಮಾಡುವ ಸಾಧ್ಯತೆ ಇರುವುದರಿಂದ ಶಾಲೆಗಳ ಬಿಸಿಯೂಟ ತಯಾರು ಮಾಡುವ ಕೊಠಡಿಗಳಿಗೆ ಸಿ.ಸಿ.ಕ್ಯಾಮರಾ ಅಳವಡಿಸಬಾರದು ಹಾಗೂ ಈಗಾಗಲೇ ಸಿಸಿ ಕ್ಯಾಮರಾ ಅಳವಡಿಸಿದ್ದರೆ ಅದನ್ನು ತೆಗೆದು ಹಾಕಬೇಕು ಎಂದು ಸಂಘ ಆಗ್ರಹಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News