ಡಿಕೆಎಂಎ ಫಲಾನುಭವಿಗಳ ಗುರುತಿನ ಚೀಟಿ ನವೀಕರಿಸಲು ಮನವಿ

Update: 2019-03-22 14:58 GMT

ಮಂಗಳೂರು: ಮಾ 22, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಮುಸ್ಲಿಂ ಕುಟುಂಬಗಳ ದುಡಿಯುವ ಸದಸ್ಯರು ಮರಣ ಹೊಂದಿದ ಸಂದರ್ಭದಲ್ಲಿ ಆ ಕುಟುಂಬಗಳಿಗೆ ರೂ 2 ಲಕ್ಷ ಸಹಾಯವನ್ನು ನೀಡುವ ಸಲುವಾಗಿ ದಕ್ಷಿಣ ಕನ್ನಡ ಮುಸ್ಲಿಂ ಅಸೋಷಿಯೇಷನ್ (ಡಿಕೆಎಂಎ) ಮೂರು ವರ್ಷಗಳ ಹಿಂದೆ ಸ್ಥಾಪನೆಗೊಂಡಿದೆ.

ಈ ಯೋಜನೆಯ ಫಲಾನುಭವಿ ಸದಸ್ಯರಿಗೆ ಗುರುತಿನ ಚೀಟಿಯನ್ನು ನಿಗದಿತ ಅವಧಿಗೆ ನೀಡಲಾಗಿರುತ್ತದೆ. ಗುರುತಿನ ಚೀಟಿಯ ಅವಧಿ ಮುಗಿದ ಎಲ್ಲಾ ಫಲಾನುಭವಿ ಸದಸ್ಯರು ತಮ್ಮ ಗುರುತಿನ ಚೀಟಿಯನ್ನು ನವೀಕರಿಸುವುದು ಹಾಗೂ ಇಷ್ಟರಲ್ಲೇ ನವೀಕರಿಸಲು ನೀಡಿದವರ ಗುರುತಿನ ಚೀಟಿ ಸಿದ್ಧವಾಗಿದ್ದು, ಫಳ್ನೀರ್ ನ ವೆಸ್ಟ್ ಗೇಟ್ ಹೈಟ್ಸ್ ನ ಮೊದಲ ಮಹಡಿಯಲ್ಲಿರುವ ಎಸ್.ಎಂ.ಆರ್ ಗ್ರೂಪ್‍ನ ಕಛೇರಿಯಿಂದ ಪಡೆದುಕೊಳ್ಳಬಹುದು ಎಂದು ದಕ್ಷಿಣ ಕನ್ನಡ ಮುಸ್ಲಿಂ ಎಸೋಸಿಯೇಷನ್‍ನ (ಡಿಕೆಎಂಎ) ಸ್ಥಾಪಕಾಧ್ಯಕ್ಷ ಹಾಜಿ ಎಸ್.ಎಂ ರಶೀದ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News