ಗಾಝಾ ಪ್ರತಿಭಟನಕಾರರ ವಿರುದ್ಧ ಇಸ್ರೇಲ್ ಬಲಪ್ರಯೋಗ ಖಂಡಿಸಿದ ವಿಶ್ವಸಂಸ್ಥೆ

Update: 2019-03-22 15:38 GMT

ಜಿನೇವ, ಮಾ. 22: ಗಾಝಾದಲ್ಲಿ ನಾಗರಿಕ ಪ್ರತಿಭಟನಕಾರರ ವಿರುದ್ಧ ಇಸ್ರೇಲ್ ಉದ್ದೇಶಪೂರ್ವಕವಾಗಿ ಹಾಗೂ ಕಾನೂನುಬಾಹಿರವಾಗಿ ಮಾರಕ ಹಾಗೂ ಮಿತಿ ಮೀರಿದ ಬಲಪ್ರಯೋಗವನ್ನು ಮಾಡಿರುವುದನ್ನು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ ಶುಕ್ರವಾರ ಖಂಡಿಸಿದೆ ಹಾಗೂ ಗಾಝಾ ಪಟ್ಟಿಯಲ್ಲಿ ಎಲ್ಲ ರೀತಿಯ ಕಾನೂನುಗಳ ಉಲ್ಲಂಘನೆ ಮಾಡಿರುವವರ ವಿರುದ್ಧ ಕಾನೂನು ಕ್ರಮಕ್ಕಾಗಿ ಕರೆ ನೀಡಿದೆ.

ಹಿಂಸಾಚಾರಕ್ಕೆ ಉತ್ತರದಾಯಿತ್ವವನ್ನು ನಿಗದಿಪಡಿಸಬೇಕೆಂದು ಒತ್ತಾಯಿಸಿ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕಾನ್ಫರೆನ್ಸ್ (ಒಐಸಿ)ನ ಪರವಾಗಿ ಪಾಕಿಸ್ತಾನ ಮಂಡಿಸಿದ ನಿರ್ಣಯವನ್ನು ವಿಶ್ವಸಂಸ್ಥೆಯ ಜಿನೇವ ಘಟಕವು 23-8 ಮತಗಳಿಂದ ಅಂಗೀಕರಿಸಿತು. 15 ಸದಸ್ಯರು ಗೈರು ಹಾಜರಾದರು.

ಕಳೆದ ವರ್ಷ ಫೆಲೆಸ್ತೀನ್ ಪ್ರತಿಭಟನಕಾರರ ವಿರುದ್ಧ ಇಸ್ರೇಲ್ ಪಡೆಗಳು ನಡೆಸಿದ ಹಿಂಸಾಚಾರದಲ್ಲಿ 189 ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ ಹಾಗೂ 6,100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಇಸ್ರೇಲ್ ಪಡೆಗಳು ಯುದ್ಧಾಪರಾಧ ಹಾಗೂ ಮಾನವತೆ ವಿರುದ್ಧ ಅಪರಾಧಗಳನ್ನು ಮಾಡಿರುವ ಸಾಧ್ಯತೆ ಇದೆ ಎಂಬುದಾಗಿ ವಿಶ್ವಸಂಸ್ಥೆಯ ತನಿಖೆಯೊಂದು ಕಂಡುಕೊಂಡ ಬಳಿಕ ಈ ನಿರ್ಣಯ ಮಂಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News