ಗಿಡಗಳನ್ನು ಬೆಳೆಸುವ ಮೂಲಕ ನೀರಿನ ಸಂರಕ್ಷಣೆ ಸಾಧ್ಯ: ರಾಜು

Update: 2019-03-22 15:23 GMT

ಉಡುಪಿ, ಮಾ.22: ಈ ವರ್ಷ ಕರ್ನಾಟಕ ರಾಜ್ಯವನ್ನು ಜಲ ವರ್ಷ ಎಂದು ಘೋಷಣೆ ಮಾಡಲಾಗಿದೆ. ಜಲ ಅಮೂಲ್ಯವಾಗಿದ್ದು ಅದರ ಸಂರಕ್ಷಣೆ ಮಾಡಬೇಕು. ಕರಾವಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ನೀರಿನ ಸಂರಕ್ಷಣೆ ಆಗಬೇಕು. ಗಿಡಗಳನ್ನು ನೆಡುವುದು ಮಾತ್ರವಲ್ಲದೆ ಈ ಮೂಲಕ ಜಲವನ್ನು ಸಂರಕ್ಷಣೆ ಕೂಡಾ ಆಗಬೇಕು ಎಂದು ಉಡುಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ರಾಜು ಕೆ. ಹೇಳಿದ್ದಾರೆ.

ಉಡುಪಿ ತಾಪಂ ವಸತಿ ಗೃಹದ ಮುಂಭಾಗ ಇಂದು ನಡೆದ ವಿಶ್ವಜಲ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಕರಾವಳಿ ಪ್ರದೇಶವು ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು, ಜಲವನ್ನು ಸಂರಕ್ಷಣೆ ಮಾಡುವ ಮೂಲಕ ಮುಂದಾಗುವ ನೀರಿನ ಸಮಸ್ಯೆಯನ್ನು ತಡೆಯಬಹುದು. ಗಿಡಗಳನ್ನು ಬೆಳೆಸುವ ಮೂಲಕ ಪರಿಸರವ್ನು ಹಸಿರಾಗಿ ಮಾಡಬೇಕು ಎಂದರು.

ತಾಲೂಕು ಪಂಚಾಯತ್ ವ್ಯವಸ್ಥಾಪಕ ರಾಮದಾಸ್ ಜಲ ಸಂರಕ್ಷಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ ಕೆ., ಬಿ.ಆರ್.ಸಿಯ ಸಮನ್ವಯಾಧಿಕಾರಿ ಉಮಾ ಪಿ., ಬ್ರಹ್ಮಾವರ ಸಿಡಿಪಿಒ ಶೋಭಾ, ಉಡುಪಿ ಸಿಡಿಪಿಒ ವೀಣಾ, ಸಾಮಾಜಿಕ ಕಾರ್ಯಕರ್ತ ಪ್ರಭಾಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News