ತನುಶ್ರೀಯಿಂದ ತನ್ನದೇ ಗಿನ್ನೆಸ್ ದಾಖಲೆ ಮುರಿಯುವ ಪ್ರಯತ್ನ!

Update: 2019-03-22 15:26 GMT

ಉಡುಪಿ, ಮಾ.22: ಉಡುಪಿಯ ಯೋಗ ಬಾಲೆ ತನುಶ್ರೀ ಪಿತ್ರೋಡಿ ಯೋಗದಲ್ಲಿ ತನ್ನ ಹೆಸರಿನಲ್ಲಿದ್ದ ಗಿನ್ನಿಸ್ ವಿಶ್ವ ದಾಖಲೆಯನ್ನು ತಾನೇ ಮುರಿ ಯುವ ಪ್ರಯತ್ನವನ್ನು ಮಾಡಿದ್ದಾರೆ.

ತನುಶ್ರೀ ಪಿತ್ರೋಡಿ 2018ರ ಎಪ್ರಿಲ್ ತಿಂಗಳಲ್ಲಿ ಒಂದು ನಿಮಿಷಕ್ಕೆ 41 ಬಾರಿ ತನ್ನ ದೇಹದ ಎದೆಯ ಭಾಗ ಹಾಗೂ ತಲೆಯನ್ನು ಸ್ಥಿರವಾಗಿ ಇರಿಸಿ ಉಳಿದ ಭಾಗವನ್ನು ತಿರುಗಿಸುವ(ಮೊಸ್ಟ್ ಫುಲ್ ಬಾಡಿ ರೆವೊಲ್ಯುಶನ್ ಮೈಟೈನಿಂಗ್ ಎ ಚೆಸ್ಟ್ ಸ್ಟಾಂಡ್ ಪೋಸಿಶನ್) ಮೂಲಕ ಗಿನ್ನೆಸ್ ವಿಶ್ವದಾಖಲೆ ಯನ್ನು ಮಾಡಿದ್ದರು.

ಮತ್ತೆ ಸತತ ಪರಿಶ್ರಮದ ಮೂಲಕ ತನುಶ್ರೀ ಒಂದು ನಿಮಿಷದಲ್ಲಿ 44 ಸುತ್ತು ತಿರುಗಿ ಹೊಸ ಗಿನ್ನಿಸ್ ದಾಖಲೆಗೆ ಪ್ರಯತ್ನ ಮಾಡಿದ್ದರು. ಈ ಕಾರ್ಯಕ್ರಮದ ವಿಡಿಯೋ ದಾಖಲೀಕರಣ ಮಾಡಿ ಕಳುಹಿಸುವಂತೆ ಗಿನ್ನಿಸ್ ಸಂಸ್ಥೆ ಸೂಚನೆ ನೀಡಿತ್ತು. ಅದರಂತೆ ತನುಶ್ರೀ ಇಂದು ಉಡುಪಿಯ ಸೈಂಟ್ ಸಿಸಿಲೀಸ್ ಶಾಲೆಯ ಸಭಾಂಗಣದಲ್ಲಿ ಈ ಪ್ರಯತ್ನ ಮಾಡಿದ್ದಾರೆ.

ಈ ಕುರಿತು ವಿಡಿಯೋ ಚಿತ್ರೀಕರಣ ಮಾಡಿ ದಾಖಲಿಸಲಾಗಿದ್ದು, ಅದನ್ನು ಗಿನ್ನೆಸ್ ಸಂಸ್ಥೆಗೆ ಕಳುಹಿಸಿಕೊಡಲಾಗುವುದು. ಇನ್ನೊಂದು ತಿಂಗಳಲ್ಲಿ ನೂತನ ದಾಖಲೆಯ ಪ್ರಮಾಣ ಪತ್ರ ಗಿನ್ನಿಸ್ ಸಂಸ್ಥೆಯು ತನುಶ್ರೀಗೆ ನೀಡಲಿದೆ ಎಂದು ತಂದೆ ಉದಯ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News