ಬಂಟ್ವಾಳ: ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಬಾಲಕಿಯ‌ ಮೇಲೆ ಅತ್ಯಾಚಾರ

Update: 2019-03-22 16:19 GMT

ಬಂಟ್ವಾಳ, ಮಾ. 22: ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಬಂಟ್ವಾಳ ತಾಲ್ಲೂಕು ಉಳಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಉಳಿ ಗ್ರಾಮದ ಪುಳೇರಿ ನಿವಾಸಿ ಸತೀಶ ಪೂಜಾರಿ ಅತ್ಯಾಚಾರ ಎಸಗಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಫೆ. 11ರಂದು ಮನೆಯಲ್ಲಿ ಬಾಲಕಿಯು ಒಂಟಿಯಾಗಿದ್ದ ಸಮಯದಲ್ಲಿ ಆರೋಪಿ ಸತೀಶ ಪೂಜಾರಿ ನೀರು ಕೇಳುವ ನೆಪದಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿದ್ದಾನೆ. ಬಳಿಕ ಮನೆಯ ಚಾವಡಿಯ ಮೇಲೆ ಬಾಲಕಿಯ ಅತ್ಯಾಚಾರಗೈದಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News