ಬ್ರೆಕ್ಸಿಟ್ ಗಡುವನ್ನು 2 ವಾರ ವಿಸ್ತರಿಸಿದ ಐರೋಪ್ಯ ಒಕ್ಕೂಟ

Update: 2019-03-22 16:37 GMT

ಲಂಡನ್, ಮಾ. 22: ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಮುಂದಿನ ಶುಕ್ರವಾರ ಯಾವುದೇ ಒಪ್ಪಂದವಿಲ್ಲದೆ ಬೇರ್ಪಡುವ ಭೀತಿಯನ್ನು ಐರೋಪ್ಯ ಒಕ್ಕೂಟದ ನಾಯಕರು ತಾತ್ಕಾಲಿಕವಾಗಿ ನಿವಾರಿಸಿದ್ದಾರೆ. ಒಕ್ಕೂಟದಿಂದ ಉತ್ತಮ ರೀತಿಯಲ್ಲಿ ಬೇರ್ಪಡಲು ಅವರು ಬ್ರಿಟನ್‌ನ ತೆರೇಸಾ ಮೇ ಸರಕಾರಕ್ಕೆ ಎರಡು ವಾರಗಳ ಹೆಚ್ಚುವರಿ ಅವಧಿಯನ್ನು ನೀಡಿದ್ದಾರೆ.

ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ನಲ್ಲಿ ಗುರುವಾರ ನಡೆದ ಸಮ್ಮೇಳನದಲ್ಲಿ ಐರೋಪ್ಯ ನಾಯಕರು ತೆರೇಸಾ ಮೇಗೆ ಈ ರಿಯಾಯಿತಿಯನ್ನು ನೀಡಿದ್ದಾರೆ. ತೆರೇಸಾ ಮೇಯ ಬ್ರೆಕ್ಸಿಟ್ ಒಪ್ಪಂದವನ್ನು ಬ್ರಿಟನ್ ಸಂಸದರು ಮಾರ್ಚ್ 29ರಂದು ಅನುಮೋದಿಸದಿದ್ದರೆ, ಯವುದೇ ಒಪ್ಪಂದವಿಲ್ಲದೆ ಒಕ್ಕೂಟದಿಂದ ಹೊರಹೋಗಬೇಕೇ ಅಥವಾ ಇನ್ನಷ್ಟು ಸಮಯಾವಕಾಶಕ್ಕಾಗಿ ಮನವಿ ಮಾಡಬೇಕೇ ಎನ್ನುವುದನ್ನು ನಿರ್ಧರಿಸಲು ಬ್ರಿಟನ್ ಸರಕಾರಕ್ಕೆ ಎಪ್ರಿಲ್ 12ರವರೆಗೆ ಅವಕಾಶ ಇದೆ ಎಂದು ಐರೋಪ್ಯ ನಾಯಕರು ಹೇಳಿದ್ದಾರೆ.

ಈ ಭರವಸೆಯ ಹಿನ್ನೆಲೆಯಲ್ಲಿ, ಇನ್ನು ಏಳು ದಿನಗಳ ಅವಧಿಯಲ್ಲಿ ಯಾವುದೇ ಒಪ್ಪಂದವಿಲ್ಲದೆ ಐರೋಪ್ಯ ಒಕ್ಕೂಟದಿಂದ ನಿರ್ಗಮಿಸುವ ಭೀತಿ ದೂರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News