ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ವಿಶ್ವ ಜಲ ದಿನಾಚರಣೆ

Update: 2019-03-22 17:40 GMT

ಬಂಟ್ವಾಳ, ಮಾ. 22: ಎಲ್ಲ ಜೀವರಾಶಿಗಳ ಜೀವಜಲ ನೀರಿನ ಸದ್ಬಳಕೆ ಮತ್ತು ನೀರಿಂಗಿಸುವ ಕ್ರಮದ ಮೂಲಕ ನೀರನ್ನು ಕಾಪಾಡಬೇಕೆಂದು ರೋಟರಿ ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ ಹೇಳಿದ್ದಾರೆ.

ಅವರು ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ಬಿ.ಸಿ.ರೋಡ್ ರೋಟರಿ ಸಭಾಂಗಣದಲ್ಲಿ ನಡೆದ ವಿಶ್ವ ಜಲ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಲುಷಿತ ನೀರಿನಿಂದ ಸಾಂಕ್ರಾಮಿಕ ಯೋಗದಿಂದ ತೊಂದರೆ, ಜೀವ ಹಾನಿಯಾಗುತ್ತಿದೆ. ನಮ್ಮಲ್ಲಿ ನೀರಿನ ಸಂರಕ್ಷಣೆ ಮಾಡುವ ವಿಧಾನ ಅಳವಡಿಸಿಕೊಳ್ಳಲು ಅವಕಾಶವಿದೆ. ರೋಟರಿ ಸಂಸ್ಥೆಯ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಉಮೇಶ್ ನಿರ್ಮಲ್ ವಿಶ್ವ ಜಲ ದಿನದ ಅಂಗವಾಗಿ ನರಿಕೊಂಬು ಗ್ರಾಮದ 10 ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರಿನ ಕೊಡುಗೆ ನೀಡುವ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಜಯರಾಜ್ ಬಂಗೇರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News