ಮಾ.27ರಂದು ಮಂಚಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

Update: 2019-03-22 17:43 GMT

ಬಂಟ್ವಾಳ, ಮಾ. 22: ತಾಲೂಕಿನ ಮಂಚಿ ಕುಕ್ಕಾಜೆಯಲ್ಲಿರುವ ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ ವತಿಯಿಂದ ಕರ್ನಾಟಕ ನಾಟಕ ಅಕಾಡಮಿ ಪ್ರಾಯೋಜಕತ್ವದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಮಾ. 27ರಂದು ಸಂಜೆ 4.30ಕ್ಕೆ ಮಂಚಿ ಲಯನ್ಸ್ ಸಭಾಭವನದಲ್ಲಿ ನಡೆಯಲಿದೆ. ಲಯನ್ಸ್ ಕ್ಲಬ್ ಸಾಲೆತ್ತೂರು ಇದಕ್ಕೆ ಸಹಕಾರ ನೀಡಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಂಜೆ 4.30ಕ್ಕೆ ಪುತ್ತೂರಿನ ರಂಗದೀಪ ತಂಡದಿಂದ ರಂಗಗೀತೆಗಳ ಬಳಿಕ 5.15ಕ್ಕೆ ಸಭಾ ಕಾರ್ಯಕ್ರಮ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಸುಮ ಕೊಡಗು ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಿರಿಯ ರಂಗನಟ, ಸಂಘಟಕ ಮಹಾಬಲೇಶ್ವರ ಹೆಬ್ಬಾರ ಆಧುನಿಕ ರಂಗಭೂಮಿ ಕುರಿತು ಉಪನ್ಯಾಸ ನೀಡುವರು.

ಈ ಸಂದರ್ಭ ಹಿರಿಯ ರಂಗ ಕಲಾವಿದ ಮಂಜು ವಿಟ್ಲ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ರಂಗಕರ್ಮಿ, ಪತ್ರಕರ್ತ ಮೌನೇಶ ವಿಶ್ವಕರ್ಮ, ಲಯನ್ಸ್ ಕ್ಲಬ್ ಸಾಲೆತ್ತೂರು ಮಂಚಿ ಅಧ್ಯಕ್ಷ ಮನರಂಜನ್ ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News