ಮಾ.24: ಕಲ್ಲಡ್ಕದಲ್ಲಿ ರಕ್ತದಾನ ಶಿಬಿರ

Update: 2019-03-22 18:09 GMT

ವಿಟ್ಲ : ಝಮಾನ್ ಬಾಯ್ಸ್ ಕಲ್ಲಡ್ಕ, ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಇವುಗಳ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವು ಮಾರ್ಚ್ 24 ರಂದು ಬೆಳಿಗ್ಗೆ 9 ಕ್ಕೆ ಕಲ್ಲಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಕಲ್ಲಡ್ಕ ಮುಹಿಯುದ್ದೀನ್ ಜುಮ್ ಮಸೀದಿ ಖತೀಬರಾದ ಇಸ್ಮಾಯಿಲ್ ಫೈಝಿ ಉದ್ಘಾಟಿಸಲಿದ್ದು ಉದ್ಯಮಿ ಸಿದ್ದೀಕ್ ಪನಾಮ ಅದ್ಯಕ್ಷತೆ ವಹಿಸುವವರು.

ಕಲ್ಲಡ್ಕ ಝಮಾನ್ ಯಂಗ್ ಮೆನ್ಸ್ ಗೌರವಾದ್ಯಕ್ಷ ಅಬ್ದುಲ್ ರಹಿಮಾನ್ ಕೆ.ಸಿ.ರೋಡ್, ಬ್ಲಡ್ ಡೋನರ್ಸ್ ಅದ್ಯಕ್ಷ ಸಿದ್ದೀಕ್ ಮಂಜೇಶ್ವರ, ಉದ್ಯಮಿಗಳಾದ ದಯಾನಂದ ಆಚಾರ್ಯ ಸೌದಿ ಅರೇಬಿಯ, ರಾಜಣ್ಣ ಲಕ್ಷ್ಮೀ ಗಣೇಶ್ ಕಲ್ಲಡ್ಕ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಝಮಾನ್ ಬಾಯ್ಸ್ ಅದ್ಯಕ್ಷ ಸೂರಜ್ ಮನ್ಸೂರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News