ಬ್ರಿಟನ್ ಕಂಪ್ಯೂಟರ್ ಹಗರಣ: ಭಾರತ ಮೂಲದ ವ್ಯಕ್ತಿಗೆ ಜೈಲು

Update: 2019-03-23 18:16 GMT

ಲಂಡನ್, ಮಾ. 23: ದಿಲ್ಲಿಯ ಸಾಫ್ಟ್‌ವೇರ್ ಇಂಜಿನಿಯರ್‌ಗಳು ನಡೆಸಿದ ಲಕ್ಷಾಂತರ ಪೌಂಡ್ ಕಂಪ್ಯೂಟರ್ ಹಗರಣಕ್ಕೆ ಸಂಬಂಧಿಸಿ ಉತ್ತರ ಇಂಗ್ಲೆಂಡ್‌ನಲ್ಲಿರುವ ಭಾರತ ಮೂಲದ ವ್ಯಕ್ತಿಯೊಬ್ಬನಿಗೆ ಇಲ್ಲಿನ ನ್ಯಾಯಾಲಯವೊಂದು 28 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ತಾವು ಜಾಗತಿಕ ಸಾಫ್ಟ್‌ವೇರ್ ಕಂಪೆನಿ ಮೈಕ್ರೋಸಾಫ್ಟ್‌ನಿಂದ ಮಾತನಾಡುತ್ತಿರುವುದು ಹಾಗೂ ನಿಮ್ಮ ಕಂಪ್ಯೂಟರ್‌ಗಳಲ್ಲಿ ದೋಷವಿದೆ ಎಂಬುದಾಗಿ ಹೇಳಿಕೊಂಡು ಈ ವಂಚಕರು ಬ್ರಿಟನ್‌ನಲ್ಲಿರುವ ಸಂತ್ರಸ್ತರಿಗೆ ಕರೆ ಮಾಡಿದ್ದರು. ಕಂಪ್ಯೂಟರ್ ಸಮಸ್ಯೆ ಸರಿಪಡಿಸಲು ವೆಚ್ಚವಾಗುತ್ತದೆ ಹಾಗೂ ಹಣವನ್ನು ಬ್ರಿಟನ್‌ನಲ್ಲಿರುವ ಬ್ಯಾಂಕ್ ಖಾತೆಯೊಂದಕ್ಕೆ ಜಮೆ ಮಾಡಬೇಕು ಎಂದು ಅವರು ಹೇಳುತ್ತಿದ್ದರು.

ಬಲ್ಜಿಂದರ್ ಸಿಂಗ್ ಎಂಬಾತನ ಬ್ಯಾಂಕ್ ಖಾತೆಗೆ 4 ಲಕ್ಷ ಪೌಂಡ್ (ಸುಮಾರು 3.65 ಕೋಟಿ ರೂಪಾಯಿ) ಜಮೆಯಾಗಿತ್ತು. ಅವನನ್ನು ಈಗ ಜೈಲಿಗೆ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News