ಭಗತ್ ಸಿಂಗ್ ಕಾರ್ಮಿಕ ವರ್ಗದ ನಾಯಕ: ಸುರೇಶ್ ಕಲ್ಲಾಗರ್
ಕುಂದಾಪುರ, ಮಾ. 24: ಭಗತ್ ಸಿಂಗ್ ಸ್ವಾತಂತ್ರ್ಯ ಹೋರಾಟದ ಜೊತೆಗೆ ಕಾರ್ಮಿಕ ವರ್ಗದ ಪರ ಅಪಾರ ಕಾಳಜಿ ಹೊಂದಿದ್ದರು. ಬ್ರಿಟಿಷ್ ಸರಕಾರವು ಕಾರ್ಮಿಕ ವಿವಾದಗಳ ಕಾಯಿದೆ, ಮುಷ್ಕರಗಳನ್ನು ಹೂಡುವ ಹಕ್ಕಿಗೆ ಮತ್ತು ಸಾಮೂಹಿಕ ಸಂವಾದದ ಹಕ್ಕಿಗೆ ಚ್ಯುತಿ ಉಂಟು ಮಾಡುವ ಕಾಯಿದೆಗಳನ್ನು ತರಲು ಮುಂದಾದಾಗ ಶಾಸನ ಸಭೆಯಲ್ಲಿ ಹೋರಾಟ ನಡೆಸಿದ ಭಗತ್ ಸಿಂಗ್ ಕಾರ್ಮಿಕ ವರ್ಗದ ನಾಯಕ ಎಂದು ಕಾರ್ಮಿಕ ಮುಖಂ ಸುರೇಶ್ ಕಲ್ಲಾಗರ ಹೇಳಿದ್ದಾರೆ.
ಕುಂದಾಪುರ ತಾಲೂಕು ಕಟ್ಟಡ ಕಾರ್ಮಿಕರ ಸಂಘಟನೆಯ ವತಿಯಿಂದ ಹೆಮ್ಮಾಡಿ ಆದರ್ಶ ಯುವಕ ಮಂಡಲದ ಹಾಲ್ನಲ್ಲಿ ರವಿವಾರ ನಡೆದ ಹುತಾತ್ಮ ದಿನಾಚರಣೆ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.
1929 ಎ.8 ಕಾರ್ಮಿಕ ವಿವಾದಗಳ ಕಾಯಿದೆಯನ್ನು ಶಾಸನ ಸಭೆಯಲ್ಲಿ ಮಂಡಿಸಲು ನಿಗದಿಯಾಗಿದ್ದ ದಿನ. ಆ ದಿನದ ಆಯ್ಕೆ ಕೇವಲ ಆಕಸ್ಮಿಕವಲ್ಲ. ಭಾರತದ ಕಾರ್ಮಿಕ ವರ್ಗಕ್ಕೆ ಬಿಡಿಸಲಾಗದ ಕೈಕೋಳವನ್ನು ತೊಡಿಸಲು ಬ್ರಿಟೀಷ್ ಸರಕಾರ ಮೀಸಲಿರಿಸಿತ್ತು. ಇಂತಹ ಹೋರಾಟಗಳನ್ನು ಕಾರ್ಮಿಕ ವರ್ಗ ಕಾರ್ಮಿಕ ಉಳುವಿಗಾಗಿ ಇಂದಿಗೂ ನಡೆಸುತ್ತಲೆ ಬರುತ್ತಿದೆ. ಭಗತ್ ಸಿಂಗ್ ಹೋರಾಟಗಳು ನಮ್ಮಂತ ಸಂಘಟನೆಗಳಿಗೆ ಪ್ರೇಣೆಯಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘಟನೆಯ ತಾಲೂಕು ಕೋಶಾಧಿ ಕಾರಿ ಜಗದೀಶ್ ಆಚಾರ್, ಮುಖಂಡರಾದ ಸಂತೋಷ ಹೆಮ್ಮಾಡಿ, ನರಸಿಂಹ ಹೆಮ್ಮಾಡಿ, ರಮೆೀಶ್ ಬಗ್ವಾಡಿ, ಗಿರಿಜಾ ಉಪಸ್ಥಿತರಿದ್ದರು.