×
Ad

ಸಮೂಹ ಉಡುಪಿಯಿಂದ ‘ಸುಗ್ಗಿ ಸಂಭ್ರಮ’

Update: 2019-03-24 18:19 IST

ಉಡುಪಿ, ಮಾ.24: ಸಮೂಹ ಉಡುಪಿ ಇದರ ವತಿಯಿಂದ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಉದ್ಯಾವರ ಮಾಧವ ಆಚಾರ್ಯರು ರಂಗಪ್ರದರ್ಶನಗಳಲ್ಲಿ ಶೋಷಿತ ಸ್ತ್ರೀಯರ ಬದುಕಿನ ಬಗ್ಗೆ ಬೆಳಕು ಚೆಲ್ಲುವ ಸಾಕಷ್ಟು ರಂಗಪ್ರದರ್ಶನಗಳನ್ನು ನೀಡಿದ್ದಾರೆ. ಇವರ ಕೊಡುಗೆಗಳನ್ನು ವಿಶ್ವವಿದ್ಯಾನಿಲಯಗಳು ಗುರುತಿಸಿ ಗೌರವ ಡಾಕ್ಟರೇಟ್ ನೀುವ ಕೆಲಸ ಮಾಡಬೇಕು ಎಂದರು.

ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ವಹಿಸಿ ದ್ದರು. ಈ ಸಂದರ್ಭದಲ್ಲಿ ಉದ್ಯಾವರ ಮಾಧವ ಆಚಾರ್ಯ ಅವರ ‘ಅಜ್ಜ ಮೊಮ್ಮಕ್ಕಳಿಗೆ ಹೇಳಿದ ಕಥೆಗಳು’, ‘ಕೋದಂಡದ ಕೊನೆ ಮತ್ತು ಕೆಲವು ಗೀತ ರೂಪಕಗಳು’, ‘ನೆನಪೆಂಬ ಹಂಸ-ಸ್ವಾಗತ ಕಥನ’ ಪುಸ್ತಕಗಳನ್ನು ಕ್ರಮವಾಗಿ ಕವಿ ಅಂಶುಮಾಲಿ, ಸವಿತಾ ಶಾಂತಪ್ರಿಯಾ, ಜ್ಯೋತಿ ಮಹಾದೇವ್ ಬಿಡುಗಡೆ ಮಾಡಿದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ವಿಜಯ್ ಶುಭಹಾರೈಸಿದರು. ಉದ್ಯಾವರ ಮಾಧವ ಆಚಾರ್ಯ ಮಾತನಾಡಿದರು. ಯು.ಭವ್ಯ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಭಾಮಿನಿ ಕೆ.ರಾವ್, ಅಜಿತ್ ಕುಮಾರ್ ಅಂಬಲಪಾಡಿ ಹಾಗೂ ಡಾ.ಭವನಾ ಕೆ.ಶರ್ಮ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News