ಮಾ.26: ಮುಡಿಪುವಿನಲ್ಲಿ ಬೃಹತ್ ಅಧ್ಯಯನ ಶಿಬಿರ
ವಿಟ್ಲ : ಕರ್ನಾಟಕ ರಾಜ್ಯ ಸುನ್ನೀ ಜಮ್ಇಯ್ಯತುಲ್ ಉಲಮಾ ಬಂಟ್ವಾಳ ತಾಲ್ಲೂಕು ಸಮಿತಿ ವತಿಯಿಂದ ಮಾ. 26ರಂದು ಮುಡಿಪು ಗೌಸಿಯ ಜುಮಾ ಮಸ್ಜಿದ್ ಸಭಾಂಗಣದ ಅಜ್ಮೀರ್ ಖಾಜಾ ವೇದಿಕೆಯಲ್ಲಿ ತಾಲ್ಲೂಕು ಸಮಿತಿ ಅಧ್ಯಕ್ಷ ಸಯ್ಯಿದ್ ಹಬೀಬುಲ್ಲಾಹ್ ಪೂಕೋಯ ತಂಙಳ್ ಪೆರುವಾಯಿ ಅಧ್ಯಕ್ಷತೆಯಲ್ಲಿ ಬೃಹತ್ ಅಧ್ಯಯನ ಶಿಬಿರ ನಡೆಯಲಿದೆ.
ಎಸ್ ಜೆ ಯು ದ.ಕ ಜಿಲ್ಲಾ ಅಧ್ಯಕ್ಷ ಬಿಕೆ ಮುಹಮ್ಮದ್ ಅಲೀ ಫೈಝಿ ಬಾಳೆಪುಣಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಮುಹಮ್ಮದ್ ಅಲೀ ಸಖಾಫಿ ತೃಕರಿಪೂರ್ ಉಪನ್ಯಾಸ ನೀಡಲಿದ್ದಾರೆ.
ಸುನ್ನೀ ಜಂಇಯ್ಯತುಲ್ ಉಲಮಾ, ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್, ಎಸ್ಇಡಿಸಿ, ಸುನ್ನೀ ಯುವಜನ ಸಂಘ, ಸುನ್ನೀ ಮಾನೇಜ್ಮೆಂಟ್ ಅಸೋಸಿಯೇಷನ್, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್, ಕೆಸಿಎಫ್ ಸಹಿತ ಸುನ್ನೀ ಸಂಘ-ಸಂಸ್ಥೆಗಳ ಹಲವಾರು ನಾಯಕರು ಉಪಸ್ಥಿತರಿರುವರು ಎಂದು ಸಂಘಟನೆಯ ಕಾರ್ಯದರ್ಶಿ ಎಂಕೆಎಂ ಕಾಮಿಲ್ ಕೊಡಂಗಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.