ತಂಡದಿಂದ ಹಲ್ಲೆ ಪ್ರಕರಣ: ಇಬ್ಬರು ಸೆರೆ
Update: 2019-03-24 18:30 IST
ಬಂಟ್ವಾಳ, ಮಾ. 24: ಅಕ್ಕರಂಗಡಿಯಲ್ಲಿ ತಂಡವೊಂದು ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ, ಕೊಲೆ ಬೆದರಿಕೆವೊಡ್ಡಿದ ಆರೋಪದ ಮೇರೆಗೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನೆಹರು ನಗರ ಎಂಬಲ್ಲಿ ಶನಿವಾರ ನಡೆದಿದೆ.
ಇಲ್ಲಿನ ನೆಹರು ನಗರ ನಿವಾಸಿ ತಸ್ಲೀಮ್ ಆರಿಫ್ (35) ಹಲ್ಲೆಗೊಳಗಾದ ವ್ಯಕ್ತಿ. ಘಟನೆಗೆ ಸಂಬಂಧಿಸಿ ಇದೇ ಗ್ರಾಮದ ನಿವಾಸಿಗಳಾದ ಪಿ.ಎಸ್ ಇಮ್ರಾನ್ (28), ಅಬ್ದುಲ್ ಲತೀಫ್ (35) ಎಂಬವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.