×
Ad

ಮಾ.27ರಿಂದ ಅರಸ್ತಾನ ದರ್ಗಾದ ನವೀಕೃತ ಕಟ್ಟಡ ಉದ್ಘಾಟನೆ

Update: 2019-03-24 18:40 IST

ಮಂಗಳೂರು, ಮಾ. 24: ಮಲಾರ್ ಅರಸ್ತಾನದ ಅಲ್ ಮುಬಾರಕ್ ಜುಮಾ ಮಸೀದಿ ಮತ್ತು ಅರ್ರಿಫಾಯಿಯಾ ನುಸ್ರತುಲ್ ಮುಸ್ಲಿಮೀನ್ ಅಸೋಸಿಯೇಶನ್ ವತಿಯಿಂದ 43ನೆ ವಾರ್ಷಿಕೋತ್ಸವದ ಅಂಗವಾಗಿ ಸ್ವಲಾತ್ ಮಜ್ಲಿಸ್, ರಿಫಾಈ ರಾತೀಬ್ ಮತ್ತು ಅರ್ತಾನ ದರ್ಗಾದ ನವೀಕೃತ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಮಾ.27ರಿಂದ 31ರವರೆಗೆ ನಡೆಯಲಿದೆ.

ಮಾ.27ರಂದು ಮಗ್ರಿಬ್ ನಮಾಝ್ ಬಳಿಕ ದರ್ಗಾದ ನವೀಕೃತ ಕಟ್ಟಡವನ್ನು ಇರ್ಶಾದ್ ಹುಸೈನ್ ದಾರಿಮಿ ಅಲ್ ಜಝರಿ ಮಿತ್ತಬೈಲ್ ಉದ್ಘಾಟಿಸಲಿ ದ್ದಾರೆ. ಮಸೀದಿಯ ಅಧ್ಯಕ್ಷ ಮುಹಮ್ಮದ್ ಮೋನು ಅಧ್ಯಕ್ಷತೆ ವಹಿಸಲಿದ್ದು, ಖತೀಬ್ ಅಬ್ದುಸ್ಸಲಾಂ ಫೈಝಿ ಇರ್ಫಾನಿ ಪ್ರವಚನ ನೀಡಲಿದ್ದಾರೆ. ವೇದಿಕೆಯಲ್ಲಿ ಹಯಾತುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಂ ಶಾಖಿರ್ ಹುಸೈನ್ ಮುಸ್ಲಿಯಾರ್, ಮುಅಝ್ಝಿನ್ ಅಬ್ದುಲ್ ಖಾದರ್ ಮುಸ್ಲಿಯಾರ್, ಮಸೀದಿಯ ಮಾಜಿ ಅಧ್ಯಕ್ಷ ಹಂಝ ಮಲಾರ್, ಉಪಾಧ್ಯಕ್ಷ ಡಿ.ಮುಹಮ್ಮದ್, ಕೋಶಾಧಿಕಾರಿ ಎನ್.ಕರೀಂ, ಕಾರ್ಯದರ್ಶಿ ದಾವೂದ್ ದೊಡ್ಡಮನೆ, ಮಾಜಿ ಪ್ರಧಾನ ಕಾರ್ಯ ದರ್ಶಿಗಳಾದ ಎಂ.ಪಿ.ಹಸನ್, ಅಶ್ರಫ್ ಫೈಝಿ, ಟಿ. ನಾಸಿರ್ ಮಲಾರ್, ಕೆ.ಎಂ. ಹನೀಫ್ ಉಪಸ್ಥಿತರಿರುವರು.

ಮಾ. 28ರಂದು ಇಲ್ಯಾಸ್ ಅರ್ಶದಿ ಸಜಿಪ, ಮಾ.29ರಂದು ಹಮೀದ್ ಫೈಝಿ ಕಿಲ್ಲೂರು, ಮಾ.30ರಂದು ಅಶ್ಫಾಕ್ ಫೈಝಿ ಪ್ರವಚನ ನೀಡಲಿದ್ದಾರೆ. ಮಾ.31ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಅಸೈಯದ್ ಮುಹಮ್ಮದ್ ಸ್ವಾನ್ ತಂಙಳ್ ದುಆ ಆಶೀರ್ವಚನ ನೀಡಲಿದ್ದಾರೆ. ಮಾಜಿ ಖತೀಬ್ ಆದಂ ಫೈಝಿ ಮುಖ್ಯ ಪ್ರಭಾಷಣ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಾಜಿ ಎನ್.ಎಸ್.ಕರೀಂ, ಮುಹಮ್ಮದ್ ಹನೀಫ್ ಫೈಝಿ, ಹನೀಫ್ ಸಅದಿ, ಯು.ಕೆ.ಅಬೂಬಕರ್ ಮದನಿ, ಅಬ್ದುಸಲಾಂ ಸಅದಿ, ಝುಬೈರ್ ಫೈಝಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News