×
Ad

ಆತೂರ್: ಎಸ್.ಕೆ.ಎಸ್.ಬಿ.ವಿ. ಜಲನಿಧಿ ಅಭಿಯಾನ

Update: 2019-03-24 20:43 IST

ಉಪ್ಪಿನಂಗಡಿ: ಬದ್ರಿಯಾ ಜುಮಾ ಮಸೀದಿ ಆತೂರು ಮತ್ತು ತದ್ಬೀರುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ಸಂಘಟನೆ ಎಸ್.ಕೆ.ಎಸ್.ಬಿ.ವಿ. ವತಿಯಿಂದ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾದ ಕುಡಿಯವ ನೀರು ಜಲನಿಧಿ ಅಭಿಯಾನ ನಡೆಯಿತು.

ಕಾರ್ಯಕ್ರಮವನ್ನು ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಉದ್ಘಾಟಿಸಿ ಮಾತನಾಡಿ ಇಸ್ಲಾಂ ಜೀವನದಲ್ಲಿ ಇತಿಮಿತಿಗಳನ್ನು ಅಳವಡಿಸಲು ಕಲಿಸಿದ್ದು, ಅದರಂತೆ ನಾವು ನಿತ್ಯ ಬಳಸುವ ನೀರನ್ನು ಮಿತವಾಗಿ ಬಳಸಿ, ನಾಳೆಗಾಗಿ ಜೀವ ಹನಿಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದರು.

ಸಮಾರಂಭದಲ್ಲಿ ಬದ್ರಿಯಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್, ಕಾರ್ಯದರ್ಶಿ ಸಿರಾಜುದ್ದೀನ್ ಬಡ್ಡಮೆ, ಶಾಲಾ ಸಮಿತಿ ಉಪಾಧ್ಯಕ್ಷ ಪೊಡಿಕುಂಞಿ ನೀರಾಜೆ, ರೇಂಜ್ ಸಮಿತಿ ಪದಾಧಿಕಾರಿಗಳಾದ ಅಬ್ದುಲ್ ಅಝೀಝ್, ಇಸ್ಮಾಯಿಲ್ ಕೆಮ್ಮಾರ, ಮದ್ರಸ ಅಧ್ಯಾಪಕರಾದ ಹಂಝ ಸಖಾಫಿ, ಹಮೀದ್ ಮೌಲವಿ, ಬಶೀರ್ ಮುಸ್ಲಿಯಾರ್, ಎಸ್‍ಕೆಎಸ್‍ಎಸ್‍ಎಫ್ ಕೋಶಾಧಿಕಾರಿ ಝಕರಿಯಾ ಮುಸ್ಲಿಯಾರ್, ಎಸ್.ಕೆ.ಎಸ್.ಬಿ.ವಿ. ಅಧ್ಯಕ್ಷ ಅನೀಶ್, ಕಾರ್ಯದರ್ಶಿ ತಂಝೀಲ್ ಮತ್ತಿತರರು ಉಪಸ್ಥಿತರಿದ್ದರು.

ಮದ್ರಸ ಮುಖ್ಯ ಶಿಕ್ಷಕರಾದ ಕೆ.ಎಂ.ಎಸ್. ಫೈಝಿ ಸ್ವಾಗತಿಸಿ, ರಫೀಕ್ ಮುಸ್ಲಿಯಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News