×
Ad

ಸ್ಕೂಟರ್ ಪಲ್ಟಿ: ಸವಾರ ಮೃತ್ಯು

Update: 2019-03-24 22:28 IST

ಕಾಪು, ಮಾ.24: ಸ್ಕೂಟರೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ಕಲ್ಮಂಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಮಾ.23 ರಂದು ಮಧ್ಯಾಹ್ನ ವೇಳೆ ನಡೆದಿದೆ.

ಮೃತರನ್ನು ಕಟಪಾಡಿ ಮಣಿಪುರ ನಿವಾಸಿ ಹಮೀದ್(73) ಎಂದು ಗುರು ತಿಸಲಾಗಿದೆ.

ಇವರು ಸ್ಕೂಟರ್‌ನಲ್ಲಿ ಉಡುಪಿ -ದೆಂದೂರುಕಟ್ಟೆ ರಸ್ತೆಯಲ್ಲಿ ಉಡುಪಿ ಕಡೆಗೆ ಹೋಗುತ್ತಿರುವಾಗ ಸ್ಕಿಡ್ ಆಗಿ ಬಿದ್ದರೆನ್ನಲಾಗಿದೆ. ಗಂಭೀರ ವಾಗಿ ಗಾಯಗೊಂಡ ಹಮೀದ್ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕಾಫು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News