ಕಾಂಗ್ರೆಸ್ ಅಭ್ಯರ್ಥಿಗೆ ಸೋಲು ಖಚಿತ ಎಂದ ಜನಾರ್ದನ ಪೂಜಾರಿ
Update: 2019-03-24 22:32 IST
ಮಂಗಳೂರು, ಮಾ.24: ‘ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಸೋಲುಂಟಾಗಲಿದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ರವಿವಾರ ಭವಿಷ್ಯ ನುಡಿದಿದ್ದಾರೆ.
‘ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಗಂಡಾಂತರವಿದೆ. ಬಿಜೆಪಿಯು ಅಭಿವೃದ್ಧಿಪರ ಕೆಲಸಗಳನ್ನು ಮಾಡುತ್ತಿದೆ. ದ.ಕ. ಲೋಕಸಭಾ ಕ್ಷೇತ್ರದಲ್ಲಿ ನಾನು ಸ್ಪರ್ಧಿಸಿದರೂ ಗೆಲ್ಲುವುದಿಲ್ಲ’ ಎಂದು ಜನಾರ್ದನ ಪೂಜಾರಿ ಖಾಸಗಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
‘ಮುಂದಿನ ಎರಡು ಚುನಾವಣೆಗಳಲ್ಲೂ ನರೇಂದ್ರ ಮೋದಿಯೇ ಗೆಲ್ಲುತ್ತಾರೆ. ಎಲ್ಲವನ್ನೂ ಜನರು ತೀರ್ಮಾನಿಸುತ್ತಾರೆ. ಜಿಲ್ಲೆಯಲ್ಲೂ ಮುಂದಿನ ಎರಡು ಅವಧಿಗೆ ಬಿಜೆಪಿಯೇ ಗೆಲುವು ಸಾಧಿಸಲಿದೆ’ ಎಂದು ಜನಾರ್ದನ ಪೂಜಾರಿ ಹೇಳಿದರು.