ರಾಹುಲ್ ಗಾಂಧಿ ನಪುಂಸಕ ಎಂದ ಬಿಜೆಪಿ ಸಚಿವ

Update: 2019-03-25 08:26 GMT

ಹೊಸದಿಲ್ಲಿ, ಮಾ. 24: ಆದಿತ್ಯನಾಥ್ ಸರಕಾರದ ಸಚಿವ ಬಿಜೆಪಿಯ ಶ್ರೀಕಾಂತ್ ಶರ್ಮಾ ಅವರು ಟ್ವೀಟ್ ಒಂದರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ‘ನಪುಂಸಕ’ ಎಂದು ಕರೆಯುವ ಮೂಲಕ ರಾಜಕೀಯ ತೀರಾ ಕೆಳಮಟ್ಟಕ್ಕೆ ಇಳಿದಿದೆ. ಇದರೊಂದಿಗೆ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ನಪುಂಸಕ’ ಎಂದು ಕರೆದು ಎದುರೇಟು ನೀಡುವ ಮೂಲಕ ಅದು ಇನ್ನಷ್ಟು ಕೆಳಮಟ್ಟಕ್ಕೆ ಕುಸಿಯಿತು.

ಎರಡು ದಿನಗಳ ಹಿಂದೆ ಹಿಂದಿಯಲ್ಲಿ ಟ್ವೀಟ್ ಮಾಡಿದ ಉತ್ತರಪ್ರದೇಶದ ಪ್ರಣಾಳಿಕೆಯ ಉಸ್ತುವಾರಿಯಾಗಿರುವ ಶರ್ಮಾ, ‘‘ಕಾಂಗ್ರೆಸ್ ಅಧ್ಯಕ್ಷ ಹೇಡಿ ನಪುಂಸಕ ರಾಹುಲ್ ಗಾಂಧಿ ಅವರ ಅಣತಿಯಂತೆ ಈ ಹೇಳಿಕೆ ನೀಡಿರುವುದು ಅವಮಾನಕರ. ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿರುವುದಕ್ಕೆ ಸಂಪೂರ್ಣ ವಿಶ್ವ ಬಿಜೆಪಿ ಸರಕಾರದೊಂದಿಗೆ ನಿಂತಿದೆ. ಆದರೆ, ಕಾಂಗ್ರೆಸ್ ಟೀಕಿಸುವ ಮೂಲಕ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಿದೆ’’ ಎಂದಿದ್ದರು.

 ಬಿಹಾರದಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಆರ್‌ಜೆಡಿ ಇಂದು ಶರ್ಮಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿತು.

‘‘ರಾಹುಲ್ ಗಾಂಧಿ ಅವರು ನಪುಂಸಕ ಎಂದು ಹಾಗೂ ನರೇಂದ್ರ ಮೋದಿ ಅಲ್ಲ ಎಂದು ನಿಮಗೆ ಹೇಗೆ ಗೊತ್ತು ? ಅದನ್ನು ತಿಳಿಯಲು ದೇಶ ಬಯಸುತ್ತದೆ. ಬಿಜೆಪಿಯ ವರಿಷ್ಠರ ಭಾಷೆ ಆಕ್ಷೇಪಾರ್ಹವಾಗಿರುವಾಗ, ಅವರ ಈ ಹಿಂದಿನ ನಡೆ ವಿವಾದಾತ್ಮಕವಾಗಿರುವಾಗ ಹಾಗೂ ರಕ್ತದಿಂದ ಮುಚ್ಚಿರುವಾಗ ಅವರಿಂದ ಸಂಸದೀಯ ಭಾಷೆ ಹಾಗೂ ನಡತೆಯನ್ನು ನಿರೀಕ್ಷಿಸುವುದು ಮೂರ್ಖತನ’’ ಎಂದು ಹಿಂದಿಯಲ್ಲಿ ಮಾಡಿದ ಟ್ವೀಟ್‌ನಲ್ಲಿ ಆರ್‌ಜೆಡಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News