ಝಮಾನ್ ಬೊಯ್ಸ್ ಕಲ್ಲಡ್ಕ, ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ರಕ್ತದಾನ ಶಿಬಿರ

Update: 2019-03-24 17:32 GMT

ಕಲ್ಲಡ್ಕ: ಝಮಾನ್ ಬೊಯ್ಸ್ ಕಲ್ಲಡ್ಕ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಇದರ ಸಹಭಾಗಿತ್ವದಲ್ಲಿ  ಬೃಹತ್ ರಕ್ತದಾನ ಶಿಬಿರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕದಲ್ಲಿ ರವಿವಾರ ನಡೆಯಿತು.

ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಇಸ್ಮಾಯಿಲ್ ಫೈಝಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಾರ್ತಾಭಾರತಿ ವರದಿಗಾರ ಲತೀಫ್ ನೇರಳಕಟ್ಟೆ ಮಾತನಾಡಿ ಜೀವನದಲ್ಲೇ ಶ್ರೇಷ್ಟ ದಾನಗಳಲ್ಲೊಂದಾದ ರಕ್ತದಾನವು ಒಬ್ಬ ವ್ಯಕ್ತಿಗೆ ಮರು ಜೀವ ನೀಡುವ ಶಕ್ತಿಯನ್ನು ಹೊಂದಿದೆ ಆ ನಿಟ್ಟಿನಲ್ಲಿ ಇಂತಹ ಶಿಬಿರಗಳ ಆಯೋಜನೆ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ , ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಿದ್ದೀಕ್ ಪನಾಮ ಅವರು ಮಾತನಾಡಿದರು.

ಈ ಸಂದರ್ಭ ಉದ್ಯಮಿಗಳಾದ ದಯಾನಂದ ಆಚಾರ್ಯ ಸೌದಿ ಅರೇಬಿಯಾ, ಸಮಾಜ ಸೇವಕರಾದ ಹಕೀಂ ಕಲ್ಲಡ್ಕ, ಡಿ ಕೆ ಅಝ್ಮಲ್ ಕಾಂತಡ್ಕ, ಸಿದ್ದೀಕ್ ಜಿಎಸ್, ಶಾಫಿ ಐ ಎನ್, ಜಾಫರ್ ಕಲ್ಲಡ್ಕ, ಝಮಾನ್ ಬಾಯ್ಸ್ ಕಲ್ಲಡ್ಕದ ಗೌರವಾಧ್ಯಕ್ಷ ರಹಿಮಾನ್ ಕೆ ಸಿ ರೋಡ್ ,ಹಜಾಜ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ  ಇಮ್ತಿಯಾಝ್ ಗೋಳ್ತಮಜಲು, ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಾಧಿಕಾರಿ  ಲಕ್ಷ್ಮೀ ಮೇಡಂ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ಒಟ್ಟು 133 ರಕ್ತದಾನಿಗಳು ರಕ್ತದಾನ ಮಾಡಿದರು. ಬ್ಲಡ್ ಡೋನರ್ಸ್ ಮಂಗಳೂರು ತಂಡದ ಕಾರ್ಯದರ್ಶಿ ನವಾಝ್ ಕಲ್ಲರಕೋಡಿ, ಅಶ್ರಫ್. ಉಪ್ಪಿನಂಗಡಿ,ಮಾಸ್ಟರ್ ಮಹಮ್ಮದ್ ಫಾಝಿಲ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ಸಮಾಜ ಸೇವಕರಾದ ಫಾರೂಕ್ ಬಿಗ್ ಗ್ಯಾರೇಜ್ ಹಾಗೂ ಲತೀಫ್ ಉಪ್ಪಿನಂಗಡಿ ಅವರನ್ನು ಸನ್ಮಾನಿಸಲಾಯಿತು. ರಕ್ತದಾನಿ ಗಳಿಗೆ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಝಮಾನ್ ಬೊಯ್ಸ್ ಕಲ್ಲಡ್ಕ ಅಧ್ಯಕ್ಷ ಮನ್ಸೂರ್ ಕಲ್ಲಡ್ಕ ಸ್ವಾಗತಿಸಿ, ವಂದಿಸಿದರು. ಬ್ಲಡ್ ಡೋನರ್ಸ್ ಮಂಗಳೂರು ಇದರ ಕಾರ್ಯ ನಿರ್ವಾಹಕರಾದ ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News