ಎನ್‌ಎಂಎಂಎಸ್ ವಿದ್ಯಾರ್ಥಿವೇತನ: ಉಡುಪಿ ಜಿಲ್ಲೆಯಲ್ಲಿ 118 ವಿದ್ಯಾರ್ಥಿಗಳು ಆಯ್ಕೆ
Update: 2019-03-27 18:40 IST
ಉಡುಪಿ, ಮಾ. 27: 2018ರ ನವೆಂಬರ್ ತಿಂಗಳಲ್ಲಿ ನಡೆದ ಎನ್‌ಎಂಎಂಎಸ್ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ 118 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ವಿದ್ಯಾರ್ಥಿಗಳ ಪಟ್ಟಿ ಆಯಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಲ್ಲಿ ಮತ್ತು ಶಾಲೆಗಳಲ್ಲಿ ಲಭ್ಯವಿದೆ.
ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಹೆಸರಿನಲ್ಲಿ ಹೊಂದಿರುವ ರಾಷ್ಟ್ರೀಕೃತ ಬ್ಯಾಂಕಿನ ಪಾಸ್‌ಪುಸ್ತಕದ ಪ್ರತಿ, ಆಧಾರ್ ಮತ್ತು ಜಾತಿ-ಆದಾಯ ಪ್ರಮಾಣ ಪತ್ರದ ಪ್ರತಿಗಳನ್ನು ಆಯಾ ಶಾಲೆ ಮುಖ್ಯಶಿಕ್ಷಕರಿಗೆ ಈ ತಿಂಗಳ ಅಂತ್ಯದೊಳಗೆ ತಪ್ಪದೇ ಸಲ್ಲಿಸುವಂತೆ ಸೂಚಿಸಲಾಗಿದೆ.
ಹೆಚ್ಚಿನ ವಿವರಗಳನ್ನು ಆಯಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಅಥವಾ ಚಂದ್ರ ನಾಯ್ಕಿ, ಉಪನ್ಯಾಸಕರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಡಯಟ್ ಉಡುಪಿ (ಮೊಬೈಲ್:9449449602) ಇವರನ್ನು ಸಂಪರ್ಕಿಸಲು ಡಯಟ್‌ನ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.