×
Ad

ಕಾರ್ಕಳ: ಎ.1ರಿಂದ ವಿಶೇಷ ಬೇಸಿಗೆ ಶಿಬಿರ

Update: 2019-03-27 18:55 IST

ಕಾರ್ಕಳ: ಸ್ಥಳೀಯ ಕ್ರೈಸ್ಟ್‍ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗಾಗಿ ವಿಶೇಷ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.

5ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈ ಶಿಬಿರ ಆಯೋಜಿಸಲಾಗಿದ್ದು, ಎ.1ರಿಂದ 5ರ ವರೆಗೆ ಐದು ದಿನಗಳ ಕಾಲ ಶಿಬಿರ ನಡೆಯಲಿದೆ.

ಶಿಬಿರದಲ್ಲಿ ಸ್ನೇಕ್ ಶೊ, ಶ್ಯಾಡೋ ಪ್ಲೇ, ಜಾದೂ ಪ್ರದರ್ಶನ, ಹಾಡುಗಾರಿಕೆ, ಕಿಕ್ ಬಾಕ್ಸಿಂಗ್, ಸೂಪರ್ ಮಿನಿಟ್, 5ಡಿ ಸಿನಿಮಾ, ನೃತ್ಯ, ಕಸದಿಂದ ರಸ, ಕ್ರಾಫ್ಟ್, ಮಣ್ಣಿನ ಕಲಾಕೃತಿ ರಚನೆ, ಒಂದು ದಿನದ ಪ್ರವಾಸ ಇತ್ಯಾದಿ ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆಯ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇತರ ಶಾಲೆಗಳ ವಿದ್ಯಾಥಿಗಳಿಗೂ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. ಭಾಗವಹಿಸಲು ಇಚ್ಚಿಸುವ ಸಂಸ್ಥೆಯ ಹೊರಗಿನ ಆಸಕ್ತ ಮಕ್ಕಳು ಮೊಬೈಲ್ ಸಂಖೈ 7022274843ನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News