ಕಾರ್ಕಳ: ಸರಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಹೊಸ ಅವಿಷ್ಕಾರ
Update: 2019-03-27 18:59 IST
ಕಾರ್ಕಳ: ಅತ್ತೂರು ಗುಂಡ್ಯಡ್ಕ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಅಂತಿಮ ವರ್ಷದ ಮೆಕ್ಯಾನಿಕಲ್ ವಿದ್ಯಾರ್ಥಿಗಳು ಹೊಸ ಯಂತ್ರವನ್ನು ಆವಿಷ್ಕರಿಸಿ ಗಮನ ಸೆಳೆದಿದ್ದಾರೆ.
ಐವರು ವಿದ್ಯಾರ್ಥಿಗಳು ಸೇರಿಕೊಂಡು ಬೈಕ್ ಇಂಜಿನ್‍ವೊಂದನ್ನು ಅವಳಡಿಸಿ ಕೃಷಿಕರಿಗೆ ಅನುಕೂಲವಾಗುವಂತೆ ತಂತ್ರಜ್ಞಾನವೊಂದನ್ನು ಪತ್ತೆಹಚ್ಚಿದ್ದಾರೆ. ಇದರಿಂದ ತೋಟಗಳಲ್ಲಿ ಕೆಲಸ ಮಾಡುವ ವೇಳೆ ಕೃಷಿಗೆ ಸಂಬಂಧಿಸಿದ ಪರಿಕರಗಳನ್ನು ಹೊತ್ತು ಸಾಗಲು ಈ ಯಂತ್ರ ನೆರವಾಗಬಲ್ಲುವುದು. ಅಲ್ಲದೆ ಬೈಕ್‍ನ ಇಂಜಿನ್ ಬಳಕೆ ಮಾಡಿರುವದರಿಂದ ಕಡಿಮೆ ಖರ್ಚು ಹಾಗೂ ನಿರ್ವಹಣೆ ಸುಲಭವಾಗಲಿದೆ. ಉತ್ತಮ ಮೈಲೇಜ್ ಹೊಂದಿದ್ದು, ಚಲಾವಣೆಗೂ ಅನುಕೂಲ ಎನ್ನುವುದು ವಿದ್ಯಾರ್ಥಿಗಳ ಅನಿಸಿಕೆ.
ಅಂತಿಮ ವರ್ಷದ ಮೆಕ್ಯಾನಿಕಲ್ ವಿದ್ಯಾರ್ಥಿಗಳಾದ ಆದಿತ್ಯ, ಸೌರಭ್ ಶೆಟ್ಟಿ, ಮನೋಜ್, ಗಗನ್ ಮತ್ತು ನಿತೀನ್ ಸೇರಿಕೊಂಡು ಈ ಮಾದರಿಯನ್ನು ಪರಿಚಯಿಸಿದ್ದಾರೆ.